ರಾಯಚೂರು: ವಿದ್ಯುತ್ ತಂತಿ ತಗುಲಿ ರೈತನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾನವಿ ತಾಲೂಕಿನ ಜೂಕೂರು ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ರೈತ ಸಾವು.. ಸಾವಿನ ದವಡೆಯಿಂದ ಪಾರಾದ ಪತ್ನಿ - Raichur Latest News
ವಿದ್ಯುತ್ ತಂತಿ ತಗುಲಿ ರೈತನೋರ್ವ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಜೂಕೂರು ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ರೈತ ಸಾವು..ಸಾವಿನ ದವಡೆಯಿಂದ ಪಾರಾದ ಪತ್ನಿ
ಆಂಜನೇಯ ಮೃತ ರೈತ. ಇಂದು ಬೆಳಗ್ಗೆ ಆಂಜನೇಯ ಹಾಗೂ ಅವರ ಪತ್ನಿ ಎಂದಿನಂತೆ ತಮ್ಮ ಜಮೀನಿಗೆ ತೆರಳಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ಬಾಗಿದ್ದ ತಂತಿ ತಗುಲಿ ಆಂಜನೇಯ ಮೃತಪಟ್ಟಿದ್ದು, ಪತ್ನಿ ಸರೋಜಮ್ಮ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.