ರಾಯಚೂರು: ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ನೊಂದು ರೈತ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ (farmer committed suicide in raichur) ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಕಾಲಿಕ ಮಳೆಯಿಂದ ಬೆಳೆ ನಾಶ: ರಾಯಚೂರಿನಲ್ಲಿ ರೈತ ಆತ್ಮಹತ್ಯೆ - ರಾಯಚೂರಿನಲ್ಲಿ ಮನನೊಂದು ರೈತ ಆತ್ಮಹತ್ಯೆ
ಲಿಂಗಸೂಗೂರು ತಾಲೂಕಿನ ಬೋಗಾಪುರ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ಮನನೊಂದು ರೈತನೊಬ್ಬ ನೇಣು ಬಿಗಿದುಕೊಂಡ ಆತ್ಮಹತ್ಯೆ (farmer committed suicide in raichur) ಮಾಡಿಕೊಂಡಿದ್ದಾನೆ.
ರೈತ ಆತ್ಮಹತ್ಯೆ
ಲಿಂಗಸೂಗೂರು ತಾಲೂಕಿನ ಬೋಗಾಪುರ ಗ್ರಾಮದ ವೀರನಗೌಡ ಮಾಲಿಪಾಟೀಲ್ (55) ಮೃತ ರೈತ. ಈತ 8 ಎಕರೆ ಜಮೀನು ಹೊಂದಿದ್ದು ಭತ್ತ ಬೆಳೆದಿದ್ದ. ಫಸಲು ಇನ್ನು ಸ್ವಲ್ಪದಿನಗಳ ಕಳೆದರೆ ಕೈಗೆ ಬರುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಪೈರು ನೆಲಕಚ್ಚಿತು. ಇದರಿಂದ ಆಘಾತವಾಗಿ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೀರನಗೌಡ ಅವರು ಬ್ಯಾಂಕ್ ಹಾಗೂ ಖಾಸಗಿಯಾಗಿ ಸಾಲ ಮಾಡಿದ್ದರು ಎಂಬ ಮಾಹಿತಿ ಇದೆ.