ರಾಯಚೂರು:ಎಸ್‌ಸಿ, ಎಸ್‌ಟಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎನ್ನುವ ಹೋರಾಟ ಹಳೆಯದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಗಿಲ್ಲೆಸೂಗೂರು ಗ್ರಾಮದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರಿಯಾಂಕ್ ಖರ್ಗೆ ಸಚಿವರಿದ್ದ ವೇಳೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಆದರೆ ಈ ಸಮಿತಿ ವರದಿ ಪೂರ್ಣಗೊಳಿಸಿದಾಗ ನಮ್ಮ ಸರ್ಕಾರ ಇರಲಿಲ್ಲ. ವರದಿ ಕೊಟ್ಟು ಎರಡು ವರ್ಷ ಮೂರು ತಿಂಗಳಿಗೂ ಜಾಸ್ತಿಯಾಗಿದೆ ಎಂದರು.
ವರದಿ ಬಂದಾಗಿನಿಂದ ನಮ್ಮ ಎಸ್‌ಸಿ, ಎಸ್‌ಟಿ ಶಾಸಕರು ಧ್ವನಿ ಎತ್ತಿದ್ದರು. ಕೊನೆ ಅಧಿವೇಶನದಲ್ಲಿ ಶಾಸಕರು ಬಾವಿಗಿಳಿದು ಹೋರಾಟ ಮಾಡಿದ್ರು. ಸಿಎಂ ಸರ್ವ ಪಕ್ಷ ಶಾಸಕರ ಸಭೆ ಕರೆಯುತ್ತೇನೆ ಅಂತ ಹೇಳಿದರು. ಎಸ್‌ಟಿ 3 ರಿಂದ 7 ಹೆಚ್ಚು ಮಾಡಬೇಕು. ಎಸ್‌ಸಿ 15 ರಿಂದ 17 ಆಗಬೇಕು ಒಟ್ಟು 24% ಆಗಬೇಕು ಅಂತ ವರದಿಯಲ್ಲಿದೆ ಎಂದು ಅವರು ಹೇಳಿದರು.