ಕರ್ನಾಟಕ

karnataka

By

Published : Jan 7, 2022, 8:24 PM IST

ETV Bharat / state

ರಾಯಚೂರು: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಔಷಧಿ ಪತ್ತೆ

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ವೈದ್ಯರು ಹೊರಗಡೆ ಮೆಡಿಕಲ್​ಗಳಿಗೆ ಚೀಟಿ ಬರೆದು ಔಷಧ ಖರೀದಿಸುವಂತೆ ತಿಳಿಸುತ್ತಾರೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿವೆ.

expired-drug-and-injections-found-in-hospital-at-raichur
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿಗಳು ಪತ್ತೆ

ರಾಯಚೂರು: ಜಿಲ್ಲೆಯ ಹಟ್ಟಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಔಷಧಿಗಳು, ಚುಚ್ಚುಮದ್ದುಗಳು ಪತ್ತೆಯಾಗಿವೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ(ಹಟ್ಟಿ ಚಿನ್ನದ ಗಣಿ) ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾತ್ರೆಗಳು, ಔಷಧಿ, ಚುಚ್ಚುಮದ್ದುಗಳು ಸರಬರಾಜು ಆಗಿದ್ದವು. ಆದರೆ ಅವು ಅವಧಿ ಮೀರಿವೆ ಎಂದು ತಿಳಿದುಬಂದಿದೆ.


ಈ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಉಚಿತವಾಗಿ ಔಷಧ ನೀಡಬೇಕು. ಅಲ್ಲದೇ, ಔಷಧಗಳ ಅವಧಿ ಮುಗಿಯವ ದಿನ ಸಮೀಪಿಸುತ್ತಿದ್ದರೆ ಬೇರೆ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಬೇಕಾಗಿತ್ತು. ಆದರೆ, ಕಾರ್ಯನಿರ್ವಹಿಸುವ ಫಾರ್ಮಾಸಿಸ್ಟ್‌ ಹಾಗು ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ವ್ಯರ್ಥವಾಗಿವೆ ಎಂದು ಕರವೇ ಮುಖಂಡ ದೂರಿದ್ದಾರೆ.

ಅವಧಿ ಮೀರಿದ ಚುಚ್ಚುಮದ್ದು ಪತ್ತೆ

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ವೈದ್ಯರು ಹೊರಗಡೆ ಮೆಡಿಕಲ್​ಗಳಿಗೆ ಚೀಟಿ ಬರೆದು ಕಳುಹಿಸುತ್ತಾರೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿವೆ.

ಅವಧಿ ಮೀರಿದ ಔಷಧಿಗಳು ಪತ್ತೆ

ಇದನ್ನೂ ಓದಿ:ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ.. ಸೋಂಕು ನಿಯಂತ್ರಣಕ್ಕೆ ಡಿಸಿ ಕ್ರಮ..

ABOUT THE AUTHOR

...view details