ಕರ್ನಾಟಕ

karnataka

ETV Bharat / state

ಶ್ರೀ ಗುರು ರಾಯರ ಮಂತ್ರಾಲಯಕ್ಕೆ ಭೇಟಿ ನೀಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ - ರಾಘವೇಂದ್ರ ಸ್ವಾಮಿ ಮಠ

ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ನಾಲ್ಕನೇಯ ದಿನವಾದ ಇಂದು ರಾಯರ ಮಧ್ಯಾರಾಧನೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಇಂದು ಪತ್ನಿಯೊಂದಿಗೆ ಶ್ರೀಮಠಕ್ಕೆ ಜನಾರ್ದನ ರೆಡ್ಡಿ ದಂಪತಿ ಭೇಟಿ ನೀಡಿದ್ರು..

ex minister janardhan reddy visits mantralaya
ಮಂತ್ರಾಲಯಕ್ಕೆ ಜನಾರ್ಧನ ರೆಡ್ಡಿ ದಂಪತಿ ಭೇಟಿ

By

Published : Aug 24, 2021, 7:41 PM IST

Updated : Aug 24, 2021, 9:17 PM IST

ರಾಯಚೂರು :ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ್ದಾರೆ.

ಸಂಜೆ ವೇಳೆ ಪತ್ನಿ ಅರುಣಾ ಲಕ್ಷ್ಮಿಯೊಂದಿಗೆ ಆಗಮಿಸಿದ ಜನಾರ್ದನ ರೆಡ್ಡಿ ಅವರನ್ನು ಮಠದ ಅಧಿಕಾರಿಗಳು ಬರ ಮಾಡಿಕೊಂಡರು. ಬಳಿಕ ಗ್ರಾಮದ ಆದಿದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡು ರೆಡ್ಡಿ ದಂಪತಿ ಪೂಜೆ ನೆರವೇರಿಸಿದ್ರು.

ಇದಾದ ಬಳಿಕ ರಾಯರ ಮೂಲ ಬೃಂದಾವನಕ್ಕೆ ತೆರಳಿ ದರ್ಶನ ಪಡೆದು ಪೂಜೆ ನೆರವೇರಿಸಿದ್ರು. ಶ್ರೀಗಳು ಗುರುಕುಲ ತೆರಳಿದ್ದ ಹಿನ್ನೆಲೆ ಶ್ರೀಗಳು ಬರುವಿಕೆಗಾಗಿ ಕೆಲಕಾಲ‌ ವಿಐಪಿ ಡೈನಿಂಗ್ ಹಾಲ್ ಬಳಿ ಜನಾರ್ದನ ರೆಡ್ಡಿ ಕಾದು ಕುಳಿತಿದ್ದರು.

ಶ್ರೀ ಗುರು ರಾಯರ ಮಂತ್ರಾಲಯಕ್ಕೆ ಜನಾರ್ದನ ರೆಡ್ಡಿ ದಂಪತಿ

ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ನಾಲ್ಕನೇಯ ದಿನವಾದ ಇಂದು ರಾಯರ ಮಧ್ಯಾರಾಧನೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಇಂದು ಪತ್ನಿಯೊಂದಿಗೆ ಶ್ರೀಮಠಕ್ಕೆ ಜನಾರ್ದನ ರೆಡ್ಡಿ ದಂಪತಿ ಭೇಟಿ ನೀಡಿದ್ರು.

ಪೂರ್ವ ಜನ್ಮದ ಪುಣ್ಯದ ಫಲ :ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ. ಕಳೆದ ಹತ್ತು ವರ್ಷಗಳ ಕಾಲ ನನ್ನ ಹುಟ್ಟೂರಿಗೆ ಬರಲಾಗದೇ ವನವಾಸದ ರೀತಿಯ ಸಂಕಷ್ಟ ಅನುಭವಿಸಿದೆ. ಅದರಿಂದ ಪಾರು ಮಾಡಿದ್ದು ರಾಘವೇಂದ್ರಸ್ವಾಮಿಗಳ ಪವಾಡ.

ನಾನು ಮಂತ್ರಾಲಯದ ರಾಯರ ಪರಮ ಭಕ್ತ. ಯಾವಾಗಲೂ ಸಂಕಷ್ಟದ ಗಳಿಗೆಯಲ್ಲಿ ರಾಘವೇಂದ್ರ ಸ್ವಾಮಿಗಳನ್ನು ಪ್ರಾರ್ಥಿಸುತ್ತೇನೆ. ರಾಯರ ಅನುಗ್ರಹದಿಂದಲೇ ಇಂದು 350ನೇ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ಇಲ್ಲಿ ರಾಜಕೀಯ ವಿಚಾರದ ಬಗ್ಗೆ ಮಾತಾಡಲ್ಲ. ಸಕ್ರಿಯ ರಾಜಕೀಯಕ್ಕೆ‌ ಮರಳುವ ಬಗ್ಗೆಯೂ ಏನೂ ಹೇಳಲ್ಲ ಎಂದು ರೆಡ್ಡಿ ತಿಳಿಸಿದರು.

ಇದನ್ನೂ ಓದಿ:ಮಂತ್ರಾಲಯ ಶ್ರೀ ಗುರು ರಾಘವೇಂದ್ರ ರಾಯರ ಮಧ್ಯಾರಾಧನೆ ಸಂಪನ್ನ

Last Updated : Aug 24, 2021, 9:17 PM IST

ABOUT THE AUTHOR

...view details