ಕರ್ನಾಟಕ

karnataka

ETV Bharat / state

ರಾಯಚೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಡಿಸಿ ಶರತ್ - vis,bites and script

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಇದಕ್ಕಾಗಿ ಒಟ್ಟು 9 ಕೊಠಡಿಗಳನ್ನು ಸಿದ್ಧಗೊಳಿಸಲಾಗಿದ್ದು, 352 ಜನ ಮೇಲ್ವಿಚಾರಕರು ಮತ್ತು ಸಹಾಯಕರನ್ನು ನಿಯೋಜಿಸಲಾಗಿದೆ.

2000 ಅಂಚೆ ಮತಗಳು

By

Published : May 22, 2019, 7:41 PM IST

ರಾಯಚೂರು: ರಾಯಚೂರುಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ನಗರದ ಎಲ್​ವಿಡಿ ಮಹಾವಿದ್ಯಾಲಯ ಮತ್ತು ಎಸ್ಆರ್​ಪಿಯು ಪದವಿಪೂರ್ವ ಕಾಲೇಜುಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕಾ ಕಾರ್ಯ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದರು.

352 ಮೇಲ್ವಿಚಾರಕರು, ಸಹಾಯಕರ ನಿಯೋಜನೆ:

ಕ್ಷೇತ್ರದಲ್ಲಿ ಒಟ್ಟು 9 ಮತ ಎಣಿಕೆ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು 5 ಮತಗಟ್ಟೆಗಳನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡಿ ಅಭ್ಯರ್ಥಿಗಳ/ ಏಜೆಂಟ್​ಗಳ ಸಮ್ಮುಖದಲ್ಲಿ ವಿವಿಪ್ಯಾಟ್ ಸ್ಲಿಪ್​​​ಗಳನ್ನು ಎಣಿಕೆ ಮಾಡಲಾಗುವುದು. ವೋಟ್​ ಕೌಂಟಿಂಗ್​ಗೆ ಒಟ್ಟು 352 ಮೇಲ್ವಿಚಾರಕರು ಹಾಗೂ ಸಹಾಯಕರನ್ನು ನಿಯೋಜಿಸಲಾಗಿದ್ದು, 181 ಮೈಕ್ರೋ ಅಬ್ಸರ್​ವರ್​​ಗಳು ಸಹ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮತ ಎಣಿಕೆಗಾಗಿ ಒಟ್ಟು 352 ಮೇಲ್ವಿಚಾರಕರು, ಸಹಾಯಕರ ನಿಯೋಜನೆ

ಪ್ರತಿಯೊಂದು ಸುತ್ತಿನಲ್ಲೂ ಮೈಕ್ರೋ ವೀಕ್ಷಕರು ಎರಡು ಕಂಟ್ರೋಲ್ ಯೂನಿಟ್ ಆರಿಸಿಕೊಂಡು ಮರು ಪರಿಶೀಲನೆ ಮಾಡುತ್ತಾರೆ. ಪ್ರತಿ ಸುತ್ತು ಮುಗಿದ ನಂತರ ಮಾಹಿತಿಯನ್ನು ಸಾಪ್ಟ್​ವೇರ್​​ನಲ್ಲಿ ಆಪ್​ಡೇಟ್​ ಮಾಡಲಾಗುತ್ತದೆ. ಇನ್ನು ಮತ ಎಣಿಕೆ ಕೇಂದ್ರದ ಸುತ್ತಮುತ್ತಲು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಡಿಸಿ ತಿಳಿಸಿದರು.

ಅಂಚೆ ಮತಗಳನ್ನು ಸ್ವೀಕರಿಸಲು ಮೇ.23ರ ಬೆಳಗ್ಗೆ 7.59 ನಿಮಿಷದರೆವರೆಗೆ ಅವಕಾಶವಿದೆ, ಈವರೆಗೆ ಅಂದಾಜು 2000 ಅಂಚೆ ಮತಗಳು ಸ್ವೀಕೃತಿಯಾಗಿವೆ ಎಂದರು.ಚುನಾವಣಾ ಆಯೋಗದ ವತಿಯಿಂದ ಶೋರಾಪೂರ, ಶಹಾಪೂರ, ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ವೀಕ್ಷಕರಾಗಿ ಶೈಲಾ.ಎ. ರಾಯಚೂರು ಗ್ರಾಮೀಣ ಮತ್ತು ನಗರ ಮತ್ತು ಮಾನವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ವೀಕ್ಷಕರಾಗಿ ಸಚೀಂದ್ರ ಪ್ರತಾಪ್ ಸಿಂಗ್, ದೇವದುರ್ಗ ಮತ್ತು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೀಕ್ಷಕರಾಗಿ ಸಾಸೀಮ್ ಕುಮಾರ ಬರಾಯಿ ಅವರನ್ನು ನಿಯೋಜಿಸಲಾಗಿದೆ ಜಿಲ್ಲಾಧಿಕಾರಿ ಶರತ್​ ಬಿ ವಿವರಿಸಿದರು.

ಮತ ಎಣಿಕೆ ಕೇಂದ್ರಕ್ಕೆ ವೀಕ್ಷಕರ ಭೇಟಿ:

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯಲಿರುವ ನಗರದ ಎಲ್ವಿಡಿ ಮಹಾವಿದ್ಯಾಲಯ ಮತ್ತು ಎಸ್ಆರ್​​ಪಿಯು ಕಾಲೇಜುಗಳಿಗೆ ಬುಧವಾರ(ಇಂದು) ಸಂಜೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು, ಚುನಾವಣಾ ವೀಕ್ಷಕರಾದ ಶೈಲಾ.ಎ, ಸಚೀಂದ್ರ ಪ್ರತಾಪ್ ಸಿಂಗ್, ಸಾಸೀಮ್ ಕುಮಾರ ಬರಾಯಿ, ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮತ ಎಣಿಕೆ ಕೇಂದ್ರದ ಸಿದ್ಧತೆಯನ್ನು ಪರಿಶೀಲಿಸಿದರು.

ಎಸ್ಪಿ ಹೇಳಿಕೆ:

ಮತ ಎಣಿಕೆಯ ಸುತ್ತಮುತ್ತಲು 100 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ವಿಜಯೋತ್ಸವಕ್ಕೆ ಅವಕಾಶ ಕಲ್ಪಿಸಿಲ್ಲ. ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಚುನಾವಣಾ ಆಯೋಗ ನೀಡಿರುವ ಪ್ರವೇಶ ಪತ್ರ ಪಡೆದವರನ್ನು ಹೊರತುಪಡಿಸಿ ಬೇರೆ ಯಾರೂ ಪ್ರವೇಶ ಮಾಡುವಂತಿಲ್ಲ. ಹೀಗಾಗಿ ಮೂರು ಹಂತಗಳಲ್ಲಿ ತಪಾಸಣೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೇಂದ್ರದ ಒಳಗೆ ಮೊಬೈಲ್ ಫೋನ್​ ಬಳಕೆಗೆ ನಿಷೇಧ ಹೇರಲಾಗಿದೆ. ಭದ್ರತೆಗಾಗಿ ಸಿಆರ್​ಪಿಎಫ್ ಮತ್ತು ಪೊಲೀಸರು ಸೇರಿದಂತೆ 500 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್​ಪಿ ಕಿಶೋರ್​ಬಾಬು ತಿಳಿಸಿದರು.

For All Latest Updates

ABOUT THE AUTHOR

...view details