ಕರ್ನಾಟಕ

karnataka

ETV Bharat / state

ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯ; ಡಿಸಿ ಆರ್. ವೆಂಕಟೇಶ ಕುಮಾರ್ - ರಾಯಚೂರು ಸುದ್ದಿ

ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯಕವಿದ್ದು, ಯಾವ ವಾರ್ಡ್​ನ ನಗರಸಭೆ ಸದಸ್ಯರು ಸಹಕರಿಸುವುದಿಲ್ಲವೋ ಅಂತಹ ಸದಸ್ಯರ ವಾರ್ಡಿನ ಅನುದಾನ ತಡೆ ಹಿಡಿಯಲಾಗುವುದು ಎಂದು ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಎಚ್ಚರಿಸಿದ್ದಾರೆ.

Everyone's cooperation is essential for corona control: DC R. Venkatesha Kumar
ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯಕ:ಡಿಸಿ ಆರ್.ವೆಂಕಟೇಶ ಕುಮಾರ್

By

Published : Sep 6, 2020, 12:09 AM IST

ರಾಯಚೂರು:ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ಕಾರ್ಯ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯಕ:ಡಿಸಿ ಆರ್.ವೆಂಕಟೇಶ ಕುಮಾರ್
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ತಾಲೂಕಿನಲ್ಲಿ ಪ್ರತಿದಿನ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಪ್ರದೇಶದಲ್ಲಿ ಗುಣಮಟ್ಟದ ತಪಾಸಣೆ ನಡೆಸಲು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಹಕರಿಸಬೇಕು. ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯಕವಿದ್ದು, ಯಾವ ವಾರ್ಡ್​ನ ನಗರಸಭೆ ಸದಸ್ಯರು ಸಹರಿಸುವುದಿಲ್ಲವೋ ಅಂತಹ ಸದಸ್ಯರ ವಾರ್ಡಿನ ಅನುದಾನ ತಡೆ ಹಿಡಿಯಲಾಗುವುದು ಎಂದರು.
ಪ್ರತಿಯೊಂದು ವಾರ್ಡ್​ಗಳಲ್ಲೂ ಕೊರೊನಾ ತಪಾಸಣೆ ಕುರಿತು ಜನರಿಗೆ ಮೊದಲೇ ತಿಳಿಸಿರಬೇಕು. ತಪಾಸಣೆ ಶಿಬಿರದ ಮೂಲಕ ಹೆಚ್ಚು ಜನರ ತಪಾಸಣೆಯಾಗಬೇಕು. ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ರಾಯಚೂರು ನಗರದಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಇತರೆ ತಾಲೂಕು ಅಧಿಕಾರಿಗಳು ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು. ಅನ್ಯ ಜಿಲ್ಲೆಗಳಿಗೆ ಹೊಲಿಕೆ ಮಾಡಿದಲ್ಲಿ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದು, ಸಮಯ ಬಂದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ತಾಲೂಕು ಅಧಿಕಾರಿಗಳು ಅಂಕಿ-ಅಂಶ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆಯಿಂದ ಕಾರ್ಯನಿರ್ವಸಬೇಕು ಎಂದು ಸೂಚಿಸಿದರು.

ABOUT THE AUTHOR

...view details