ಬೆಳಗಾವಿ/ರಾಯಚೂರು:ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿ ಶಾಮಕ ಸಿಬ್ಬಂದಿ ತಮ್ಮ ವಾಹನದೊಂದಿಗೆ ಧಾವಿಸಿ ಅಗ್ನಿ ನಂದಿಸಲು ಶತ ಪ್ರಯತ್ನ ಮಾಡುತ್ತಾರೆ. ಆದ್ರೆ ಬೆಂಕಿಯ ಕೆನ್ನಾಲಿಗೆಯನ್ನು ಆರಿಸಲು ಬೇಕಾದ ಸೂಕ್ತ ನೀರಿನ ವ್ಯವಸ್ಥೆಯೇ ಇಲ್ಲವಾದ್ರೆ, ಅಲ್ಲಿನ ಪರಿಸ್ಥಿತಿ ಏನಾಗಬಹುದು ಅನ್ನೋದನ್ನು ಯೋಚಿಸಲು ಸಾಧ್ಯವಿಲ್ಲ.
ಅಗ್ನಿ ಶಮನಕ್ಕೆ ಬೇಕಿದೆ ಹೈಡ್ರೆಂಟ್ ಘಟಕಗಳು- ಕ್ಷಿಪ್ರ ಕಾರ್ಯಾಚರಣೆಗೆ ರಸ್ತೆಗಳ ದುರಸ್ತಿಯಾಗಲಿ ಹೌದು, ಬೆಳಗಾವಿಯಲ್ಲಿ ಅಗ್ನಿ ಶಮನಕ್ಕೆ ಹೈಡ್ರೆಂಡ್ ಘಟಕಗಳೇ ಇಲ್ಲ. ಪಾಲಿಕೆಯ ಬಾವಿಯನ್ನೇ ಅವಲಂಬಿಸಿರೋದ್ರಿಂದ ಘಟನೆಗೆ ಬಹಬೇಗ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಪ್ರಮುಖ ಪ್ರದೇಶಗಳಲ್ಲಿ ಜನದಾನಿ ಘಟಕಗಳನ್ನು ತೆರೆಯುವ ಮೂಲಕ ಅಗ್ನಿ ದುರಂತವನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ.
ರಾಯಚೂರಿನಲ್ಲಿ ಬೆಂಕಿ ನಂದಿಸಲು ನೀರಿಗೆ ಯಾವುದೇ ಸಮಸ್ಯೆಯಿಲ್ಲ. ಆದ್ರೆ ಅಗ್ನಿ ಅವಘಡ ನಡೆದ ಸ್ಥಳಕ್ಕೆ ಬಹುಬೇಗ ತಲುಪಲು ಹದಗೆಟ್ಟ ರಸ್ತೆಗಳೇ ಅಡ್ಡಿಯಾಗಿವೆ. ಕೊಂಚ ತಂಡವಾದ್ರೆ ಬೆಂಕಿ ಹರಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸಿರುತ್ತದೆ. ಹಾಗಾಗಿ ರಸ್ತೆಗಳನ್ನು ಸರಿಪಡಿಸಿ ಅಗ್ನಿಶಾಮಕ ವಾಹನಗಳಿಗೆ ದಾರಿಮಾಡಿಕೊಡಬೇಕಿದೆ.
ಇದನ್ನೂ ಓದಿ:ಬಳ್ಳಾರಿ ಜಿಲ್ಲೆಗೆ ಬೇಕು ಇನ್ನೂ 2 ಅಗ್ನಿ ಶಾಮಕ ಠಾಣೆ.. ಸಾಂಸ್ಕೃತಿಕ ನಗರಿಯಲ್ಲಿಲ್ಲ ಯಾವುದೇ ಸಮಸ್ಯೆ
ಪ್ರತೀ ಜಿಲ್ಲೆಯಲ್ಲೂ ಅಗ್ನಿ ಅವಘಡ ನಿಯಂತ್ರಿಸಲು ಅಗ್ನಿಶಾಮಕ ಠಾಣೆ ಮತ್ತು ಸಿಬ್ಬಂದಿ ಎಷ್ಟು ಮುಖ್ಯವೋ ಅಷ್ಟೇ ಸೂಕ್ತ ನೀರಿನ ವ್ಯವಸ್ಥೆಯೂ ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿ ಪ್ರಮುಖ ಪ್ರದೇಶಗಳಲ್ಲಿ ಹೈಡ್ರೆಂಟ್ ಘಟಕಗಳು ಸ್ಥಾಪನೆಯಾಗ್ಬೇಕಿದೆ ಮತ್ತು ಹದಗೆಟ್ಟ ರಸ್ತೆಗಳೂ ಕೂಡ ಸರಿಯಾಗಬೇಕಿದೆ.