ಲಿಂಗಸುಗೂರು (ರಾಯಚೂರು): ಮುಂದಿನ 20 ತಿಂಗಳ ಅವಧಿಗೆ ಲಿಂಗಸುಗೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವಂತೆ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಕರೀಗೌಡ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಲಿಂಗಸುಗೂರು ಎಪಿಎಂಸಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಡಿಸಿಗೆ ಪತ್ರ - ಜೂನ್ 17ಕ್ಕೆ ಎಪಿಎಂಸಿ ಅಧ್ಯಕ್ಷರ ಅವಧಿ ಮುಕ್ತಾಯ
ಲಿಂಗಸುಗೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಜೂನ್ 17ರಂದು ಮುಕ್ತಾಯವಾಗಲಿದೆ. ಹೀಗಾಗಿ, ಶೀಘ್ರ ಚುನಾವಣೆ ನಡೆಸಿ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಪ್ರಸ್ತುತ ಅವಧಿಯು ಜೂನ್ 17ರಂದು ಮುಕ್ತಾಯ ಆಗಲಿದೆ. ಈ ಅವಧಿ ಪೂರ್ಣಗೊಳ್ಳುವ ಮುಂಚೆ ಎಪಿಎಂಸಿ ಕಾಯ್ದೆ ಕಲಂ 41 ಹಾಗೂ ನಿಯಮ 44ರನ್ವಯ ಕ್ರಮ ಕೈಗೊಳ್ಳಲು ಕೋರಿದ್ದಾರೆ.
ಚುನಾವಣೆ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ರಾಜಕೀಯ ಲೆಕ್ಕಾಚಾರಗಳು ಚಿಗುರೊಡೆದಿವೆ. ತಹಶೀಲ್ದಾರ್ ಕಾರ್ಯಾಲಯದಿಂದ ಕೆಲ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ ಪ್ರಕಟ ಆಗುವ ಸಾಧ್ಯತೆಗಳಿವೆ. ಆಕಾಂಕ್ಷಿಗಳು ರಾಜಕೀಯ ಬಲಾಬಲ ಪ್ರದರ್ಶನ ನಡೆಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ನಿರ್ದೇಶಕರು ಗುಪ್ತ ಸಭೆಗಳಿಗೆ ಮೊರೆ ಹೋಗಿರುವುದು ಕಂಡು ಬಂದಿದೆ