ರಾಯಚೂರು:ರಸ್ತೆ ಅಪಘಾತದಲ್ಲಿ ಗಾಯಗೊಂಡ ವೃದ್ಧರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು. ಜಿಲ್ಲೆಯ ದೇವದುರ್ಗ ತಾಲೂಕಿನ ಸುಲ್ತಾನಪುರ ಗ್ರಾಮದಿಂದ ಕಾರೊಂದು ರಾಯಚೂರು ಕಡೆ ಬರುತ್ತಿತ್ತು. ಮಾರ್ಗಮಧ್ಯೆ ಕಾರು ಪಲ್ಟಿಯಾಗಿ ಭತ್ತದ ಗದ್ದೆಗೆ ಬಿದ್ದು ಮಲ್ಲಾಪುರ ಗ್ರಾಮದ ವೃದ್ಧ ದಂಪತಿಯಾದ ಹನುಮಯ್ಯ, ಶರಣಮ್ಮ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ವೃದ್ಧ ದಂಪತಿಗೆ ಗಾಯ: ಮಾನವೀಯತೆ ತೋರಿದ ರಾಯಚೂರು ಎಸ್ಪಿ
ರಾಯಚೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡ ವೃದ್ಧ ದಂಪತಿಯನ್ನು ಅದೇ ಮಾರ್ಗದಲ್ಲಿ ಬರುತ್ತಿದ್ದ ಎಸ್ಪಿ ನಿಖಿಲ್ ಬಿ. ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ವೃದ್ಧ ದಂಪತಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಎಸ್ಪಿ
ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಎಸ್ಪಿ ನಿಖಿಲ್ ಬಿ ಅವರು ಘಟನೆ ಕಂಡು ಕಾರು ನಿಲ್ಲಿಸಿ, ಗಾಯಾಳು ವೃದ್ಧರಿಬ್ಬರು ಹಾಗೂ ಕಾರು ಚಾಲಕ ತಿರುಪತಿಯನ್ನು ತಮ್ಮ ಕಾರಿನಲ್ಲಿಯೇ ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ರಾಯಚೂರಿನಲ್ಲಿ ಗೂಡ್ಸ್ ವಾಹನ ಬೈಕ್ ಮಧ್ಯೆ ಭೀಕರ ಅಪಘಾತ.. ಮೂವರ ದುರ್ಮರಣ