ಕರ್ನಾಟಕ

karnataka

ETV Bharat / state

ಮೊಹಮ್ಮದ್ ಪೈಗಂಬರ್ ಜನ್ಮದಿನ ಹಿನ್ನೆಲೆ ರಾಯಚೂರಿನಲ್ಲಿ ಶಾಂತಿಪಾಲನಾ ಸಭೆ - eid ul miladunnabi festive meeting in raichur

ನವೆಂಬರ್ 10ರಂದು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಹಿನ್ನೆಲೆ​ ನಗರದ ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶಾಂತಿಪಾಲನಾ ಪೂರ್ವಭಾವಿ ಸಭೆ ನಡೆಸಿದರು.

ಮೊಹಮ್ಮದ್ ಪೈಗಂಬರ್ ಜನ್ಮದಿನ ಹಿನ್ನೆಲೆ..ರಾಯಚೂರಿನಲ್ಲಿ ಶಾಂತಿಪಾಲನಾ ಸಭೆ

By

Published : Nov 6, 2019, 9:45 AM IST

ರಾಯಚೂರು: ನವೆಂಬರ್ 10ರಂದು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಹಿನ್ನೆಲೆ​ ನಗರದ ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶಾಂತಿಪಾಲನಾ ಪೂರ್ವಭಾವಿ ಸಭೆ ನಡೆಸಿದರು.

ಮೊಹಮ್ಮದ್ ಪೈಗಂಬರ್ ಜನ್ಮದಿನ ಹಿನ್ನೆಲೆ: ರಾಯಚೂರಿನಲ್ಲಿ ಶಾಂತಿಪಾಲನಾ ಸಭೆ

ಈ ವೇಳೆ ಮಾತನಾಡಿದ ಪೂರ್ವ ವೃತ್ತದ ಸಿಪಿಐ ಮೊಹಮ್ಮದ್ ಫಸಿಯುದ್ದೀನ್, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ತಮ್ಮ ಜೀವನದುದ್ದಕ್ಕೂ ಶಾಂತಿ, ಸೌಹಾರ್ದ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸುವ ಮೂಲಕ ಆದರ್ಶರಾಗಿದ್ದಾರೆ. ಹಬ್ಬದಂದು ಬೃಹತ್ ಮೆರವಣಿಗೆ ನಡೆಯುವ ಕಾರಣ ಇಲಾಖೆಯಿಂದ ಈ ಬಾರಿ ಡಿಜೆ ಬ್ಯಾನ್ ಮಾಡಲಾಗಿದೆ. ಎಲ್ಲಾ ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಹಬ್ಬದ ಆಚರಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ಇನ್ನು, ನವೆಂಬರ್ 17ರಂದು ಐತಿಹಾಸಿಕ ಅಯೋಧ್ಯೆ ತೀರ್ಪು ಹೊರ ಬೀಳಲಿದೆ. ಅಂದು ಯಾವುದೇ ಸಮುದಾಯದ ಪರ ತೀರ್ಪು ಬಂದರೂ ಸ್ವಾಗತಿಸಿ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಕರೆ ನೀಡಿದರು.

ABOUT THE AUTHOR

...view details