ರಾಯಚೂರು:ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ನಡೆದ ಜೋಡಿ ಎತ್ತುಗಳ ಮೆರವಣಿಗೆಯಲ್ಲಿ ಮಂಗವೊಂದು ಸಾಗಿರುವ ಅಪರೂಪದ ಘಟನೆ ರಾಯಚೂರಿನ ಮಾನ್ವಿಯ ಆದಾಪುರದಲ್ಲಿ ನಡೆದಿದೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮಣ್ಣೆತ್ತಿನ ಅಮವಾಸ್ಯೆ...ಕಾಮಧೇನುಗಳ ಮೆರವಣಿಗೆಯಲ್ಲಿಯೇ ಸಾಗಿದ ಮಂಗ!
ಆದಾಪುರದಲ್ಲಿ ನಡೆದ ಅದ್ಧೂರಿ ಮಣ್ಣೆತ್ತಿನ ಅಮವಾಸ್ಯೆ ಆಚರಣೆಯಲ್ಲಿ ಮಂಗನ ಕುಣಿತ ಅಚ್ಚರಿಗೆ ಕಾರಣವಾಗಿ ವಿಶೇಷವಾಗಿತ್ತು. ಮಂಗನನ್ನು ಕಂಡ ಮಕ್ಕಳು ಕುಣಿದು ಖುಷಿ ಪಟ್ಟರು.
ಕೋತಿ
ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಎತ್ತಿನ ಜೋಡಿ ಮೇಲೆ ಕಾಮಧೇನುವಿನ ಮೆರವಣಿಗೆ ಸಾಗಿತ್ತು. ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮೆರವಣಿಗೆಯಲ್ಲಿ ತಮಟೆ, ಡೊಳ್ಳು ಕುಣಿತ ಪ್ರದರ್ಶನ ನಡೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಜನರ ಮಧ್ಯೆಯೇ ಮಂಗವೊಂದು ಸಾಗಿದ್ದು, 3 ಕಿಲೋ ಮೀಟರ್ ಮೆರವಣಿಗೆ ನಡೆಯಿತು.