ಕರ್ನಾಟಕ

karnataka

ETV Bharat / state

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಒಂದೇ ಕುಟುಂಬದ ಮೂವರ ಸಾವು - ಈಟಿವಿ ಭಾರತ್​ ಕನ್ನಡ

ತುಂಗಭದ್ರಾ ಎಡದಂಡೆ ಕಾಲುವೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

vdriver-lost-control-and-the-car-fell-into-the-tungabhadra-canal
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

By

Published : Aug 30, 2022, 12:43 PM IST

Updated : Aug 30, 2022, 6:56 PM IST

ರಾಯಚೂರು:ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಮಸ್ಕಿ ತಾಲೂಕಿನ ಗುಡುದೂರು ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಗೆ ಕಾರು ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.

ಲಿಂಗಸೂಗೂರು ತಾಲೂಕಿನ ಗೊನಾವಾಟ್ಲ್ ಗ್ರಾಮದ ಸೂರ್ಯರಾವ್‌(70), ಎನ್.ಸುಬ್ಬಲಕ್ಷ್ಮಿ(57), ಎನ್‌ ಶ್ರೀನಿವಾಸ್‌(40) ಮೃತರೆಂದು ಗುರುತಿಸಲಾಗಿದೆ. ಟಾಟಾ ಇಂಡಿಗೋ ಕಾರ್ ಕಾಲುವೆಗೆ ಉರಳಿದ್ದು, ಆಂಧ್ರ ಪಾಸಿಂಗ್ ಹೊಂದಿರುವ AP-11 P0900 ನಂಬರ್ ಹೊಂದಿದೆ. ಸಾರ್ವಜನಿಕರು ಟ್ರ್ಯಾಕ್ಟರ್ ಹಾಗೂ ಈಜುಗಾರರ ಸಹಾಯದಿಂದ ಶವವನ್ನು ನಾಲೆಯಿಂದ ಹೊರ ತೆಗೆದಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಬಳಗಾನೂರು ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ಜನ ಜಂಗುಳಿ ಸೇರಿದೆ. ಸ್ಥಳದಲ್ಲಿ ಮಸ್ಕಿ ಹಾಗೂ ಬಳಗಾನೂರು ಪೊಲೀಸರು ಮುಕ್ಕಾಂ ಹೂಡಿದ್ದಾರೆ. ಕ್ರೇನ್ ಸಹಾಯದಿಂದ ಕಾರು ಹೊರ ತೆಗೆಯಲಾಗಿದೆ. ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆಗೆ ಸಂಪರ್ಕ್ ಕಟ್, ಮನೆಗಳು ಜಲಾವೃತ: ಶಾಲೆಗಳಿಗೆ ರಜೆ ಘೋಷಣೆ

Last Updated : Aug 30, 2022, 6:56 PM IST

ABOUT THE AUTHOR

...view details