ರಾಯಚೂರು: ನೂತನ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡ ಡಾ.ಹರೀಶ್ ರಾಮಸ್ವಾಮಿ ಇಂದು ಅಧಿಕಾರ ಸ್ವೀಕರಿಸಿದರು.
ರಾಯಚೂರು ನೂತನ ವಿವಿ ಕುಲಪತಿಯಾಗಿ ಡಾ.ಹರೀಶ್ ರಾಮಸ್ವಾಮಿ ಅಧಿಕಾರ ಸ್ವೀಕಾರ - ಡಾ.ಹರೀಶ್ ರಾಮಸ್ವಾಮಿ ರಾಯಚೂರು ನೂತನ ವಿವಿ ಕುಲಪತಿಯಾಗಿ ನೇಮಕ
ರಾಯಚೂರು ನೂತನ ವಿಶ್ವವಿದ್ಯಾಲಯದ ಕುಲಪತಿಯಾಗಿ ಇತ್ತೀಚೆಗಷ್ಟೆ ನೇಮಕಗೊಂಡಿದ್ದ ಡಾ.ಹರೀಶ್ ರಾಮಸ್ವಾಮಿ ಇಂದು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು.
ಡಾ.ಹರೀಶ್ ರಾಮಸ್ವಾಮಿ ಅಧಿಕಾರ ಸ್ವೀಕಾರ
ನಗರದ ಯರಗೇರಾ ಬಳಿ ಸ್ನಾತಕೋತ್ತರ ಕೇಂದ್ರದ ನೂತನ ವಿವಿಯ ಕಚೇರಿಯಲ್ಲಿ ಇಂದು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಕೇಂದ್ರದಲ್ಲಿರುವ ಪ್ರೊಫೆಸರ್, ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ವಿವಿಯ ವಿಷಯ ಕುರಿತು ಮಾಹಿತಿ ಪಡೆದುಕೊಂಡು, ವಿವಿ ಆರಂಭದ ಕುರಿತು ಚರ್ಚೆ ನಡೆಸಿದ್ರು.
ಮೈಸೂರು ಮೂಲದವರಾದ ಡಾ.ಹರೀಶ್ ರಾಮಸ್ವಾಮಿ ಪ್ರಸ್ತುತ ಧಾರವಾಡ ಕವಿವಿ ರಾಜ್ಯಶಾಸ್ತ್ರ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನ ಸರ್ಕಾರ ಇತ್ತೀಚಿಗೆ ರಾಯಚೂರು ನೂತನ ವಿವಿ ಕುಲಪತಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.