ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಧಾರವಾಡ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಹರೀಶ ರಾಮಸ್ವಾಮಿರನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಯಚೂರು ವಿಶ್ವವಿದ್ಯಾಲಯಕ್ಕೆ ಮೊದಲ ಕುಲಪತಿಯಾಗಿ ಡಾ.ಹರೀಶ ರಾಮಸ್ವಾಮಿ ನೇಮಕ
ರಾಯಚೂರು ವಿಶ್ವ ವಿದ್ಯಾಲಯದ ಮೊದಲ ಕುಲಪತಿಯಾಗಿ ಡಾ.ಹರೀಶ ರಾಮಸ್ವಾಮಿ ನೇಮಕಗೊಂಡಿದ್ದಾರೆ. ವಿ ವಿ ಕಾರ್ಯಾರಂಭಕ್ಕೆ ಕಾಲೇಜು ಮತ್ತು ಆಸ್ತಿ ವರ್ಗಾವಣೆ ಪ್ರಕ್ರಿಯೆ ಜಾರಿಯಿರುವ ಸಂದರ್ಭದಲ್ಲಿ ಕುಲಪತಿಗಳ ನೇಮಕ ವಿಶ್ವವಿದ್ಯಾಲಯ ಕಾರ್ಯಗಳಿಗೆ ಪೂರಕವಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ಗುಲ್ಬರ್ಗ ವಿವಿಯನ್ನು ವಿಭಜನೆ ಮಾಡಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆ ಒಳಗೊಂಡಂತೆ ನೂತನ ರಾಯಚೂರು ವಿವಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ವಿವಿ ಆರಂಭ ವಿಳಂಬವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಕಳೆದ ಮಾರ್ಚ್ನಲ್ಲಿ ರಾಜ್ಯಪತ್ರ ಹೊರಡಿಸುವ ಮೂಲಕ ವಿವಿ ಅಧಿಕೃತ ಘೋಷಣೆಯಾಗಿತ್ತು.
ಈ ನಡುವೆ ಹಿಂದೆ ವಿವಿಯ ವಿಶೇಷಾಧಿಕಾರಿಯಾಗಿದ್ದ ಮುಜಾಫರ್ ಅಸಾದಿಯನ್ನು ಬದಲಾಯಿಸಿ ಮೈಸೂರು ವಿವಿಯ ಡಾ.ಕೊಟ್ರೇಶ್ವರನ್ನು ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ವಿವಿ ಕಾರ್ಯಾರಂಭಕ್ಕೆ ಕಾಲೇಜು ಮತ್ತು ಆಸ್ತಿ ವರ್ಗಾವಣೆ ಪ್ರಕ್ರಿಯೆ ಜಾರಿಯಿರುವ ಸಂದರ್ಭದಲ್ಲಿ ಕುಲಪತಿಗಳ ನೇಮಕ ವಿಶ್ವವಿದ್ಯಾಲಯ ಕಾರ್ಯಗಳಿಗೆ ಪೂರಕವಾಗಿದೆ.