ರಾಯಚೂರು:ತಂಡೋಪ ತಂಡವಾಗಿ ನಾಯಿಗಳು ಓಡಾಡುತ್ತಿರುವ ಬೆನ್ನಲ್ಲೆ ಇದೀಗ ಮಕ್ಕಳಿಬ್ಬರ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.
ಬೀದಿ ನಾಯಿ ದಾಳಿ: ಮಕ್ಕಳಿಬ್ಬರಿಗೆ ಗಂಭೀರ ಗಾಯ - ರಾಯಚೂರು ಸುದ್ದಿ
ತಂಡೋಪ ತಂಡವಾಗಿ ನಾಯಿಗಳು ಓಡಾಡುತ್ತಿರುವ ಬೆನ್ನಲ್ಲೆ ಇದೀಗ ಮಕ್ಕಳಿಬ್ಬರ ಮೇಲೆ ನಾಯಿ ದಾಳಿ ನಡೆಸಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.
ಗಾಯಗೊಂಡ ಮಕ್ಕಳು
ನಗರದ 12 ನೇ ವಾರ್ಡ್ನಲ್ಲಿ ಈ ಘಟನೆ ನಡೆದಿದೆ. ಮಕ್ಕಳಿಬ್ಬರು ಆಟವಾಡುತ್ತಿರುವ ವೇಳೆ ಏಕಾಏಕಿ ಹುಚ್ಚು ನಾಯಿಗಳು ಮೈ ಮೇಲೆ ದಾಳಿ ನಡೆಸಿವೆ ಎಂದು ವಾರ್ಡ್ ನಿವಾಸಿಗಳು ದೂರುತ್ತಿದ್ದಾರೆ. ಇದರಿಂದ ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಬಡಾವಣೆಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಇನ್ನೂ ನಗರದಾದ್ಯಂತ ನಾಯಿಗಳು ತಂಡೋಪ ತಂಡವಾಗಿ ಓಡಾಡುತ್ತಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.