ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಯಲ್ಲಿ ಸಾಹಸ ಮಾಡಿ ನಡುಗಡ್ಡೆಯಲ್ಲಿದ್ದ ರೋಗಿಗೆ ಔಷಧ ರವಾನಿಸಿದ ವೈದ್ಯರು - ತೆಪ್ಪದಲ್ಲಿ ತೆರಳಿದ ವೈದ್ಯರ ತಂಡ

ಭೋರ್ಗರೆಯುವ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ತೆರಳಿದ ವೈದ್ಯರ ತಂಡ ಪಾರ್ಶ್ವವಾಯುನಿಂದ ಬಳಲುತ್ತಿದ್ದ ರೋಗಿಗೆ ಸಕಾಲದಲ್ಲಿ ಔಷಧಿ ಪೂರೈಸಿ ಮಾನವೀಯತೆ ಮೆರೆದರು.

doctors delivered medicine to patient
ನಡುಗಡ್ಡೆಯಲ್ಲಿ ಸಿಲುಕಿದ್ದ ರೋಗಿಗೆ ಔಷಧಿ ತಲುಪಿಸಿದ ವೈದ್ಯರು

By

Published : Sep 18, 2022, 2:17 PM IST

ರಾಯಚೂರು: ಕೃಷ್ಣಾ ನದಿ ಪ್ರವಾಹದಿಂದಾಗಿ ನಡುಗಡ್ಡೆಯಲ್ಲಿ ಸಿಲುಕಿದ್ದ ರೋಗಿಗೆ ಔಷಧಿ ತಲುಪಿಸುವ ಮೂಲಕ ವೈದ್ಯರ ತಂಡ ಸಾಹಸ ಮಾಡಿ ಮಾನವೀಯತೆ ತೋರಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಲಿಂಗಸುಗೂರು ತಾಲೂಕಿನ ಕರಕಲಗಡ್ಡೆಯಲ್ಲಿ ಈ ಘಟನೆ ನಡೆಯಿತು. ಭೋರ್ಗರೆಯುವ ನದಿಯಲ್ಲಿ ತೆಪ್ಪದಲ್ಲಿ ಸಾಗಿದ 6 ಜನರ ವೈದ್ಯರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿದ್ದ ರೋಗಿಗೆ ಔಷಧಿ ತಲುಪಿಸಿದ ವೈದ್ಯರು

ಇದನ್ನೂ ಓದಿ:ಹೃದಯಾಘಾತಗೊಂಡು ಕುಸಿದ ವೃದ್ಧ ಮಹಿಳೆ.. ಕ್ಷಣಮಾತ್ರದಲ್ಲಿ ಜೀವ ಉಳಿಸಿದ ವೈದ್ಯ

ಕರಕಲಗಡ್ಡಿ ನಿವಾಸಿ ತಿಪ್ಪಣ್ಣ ಪಾರ್ಶ್ಚವಾಯುನಿಂದ ಬಳಲುತ್ತಿದ್ದರು. ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ತಿಪ್ಪಣ್ಣ ಕುಟುಂಬಸ್ಥರು ವಾಸಿಸುತ್ತಿದ್ದು, ಕಳೆದ ಕೆಲವು ದಿನಗಳಿಂದ ಔಷಧಿ ಖಾಲಿಯಾಗಿ ಸಂಕಷ್ಟದಲ್ಲಿದ್ದರು. ಈ ಮಾಹಿತಿ ಪಡೆದ ವೈದ್ಯರು, ಕೂಡಲೇ ಔಷಧಿ ಪೂರೈಕೆಗೆ ಮುಂದಾಗಿದ್ದಾರೆ. ಮುಳುಗು ತಜ್ಞರ ಜೊತೆ ಸೇರಿ ಜೀವದ ಹಂಗು ತೊರೆದು ಔಷಧಿ ತಲುಪಿಸಿ ಸುರಕ್ಷಿತವಾಗಿ ವಾಪಸ್ ಮರಳಿದ್ದಾರೆ.

ಇದನ್ನೂ ಓದಿ:ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಟ, 3 ಕಿ.ಮೀ ಓಡಿ ಬಂದು ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯ!

ABOUT THE AUTHOR

...view details