ರಾಯಚೂರು:ರಾಜ್ಯ ಸರ್ಕಾರ ಕೊರೊನಾ ನೆಪವಾಗಿಟ್ಟುಕೊಂಡು ಮಹರ್ಷಿ ವಾಲ್ಮೀಕಿ ಪ.ಪಂ ಅಭಿವೃದ್ಧಿ ನಿಗಮದ ಅನುದಾನ ಕಡಿತ ಮಾಡಿರುವುದನ್ನು ಸರಿಪಡಿಸಬೇಕೆಂದು ಕರ್ನಾಟಕ ವಾಲ್ಮೀಕಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವ ನಾಯಕ ಒತ್ತಾಯಿಸಿದರು.
ವಾಲ್ಮೀಕಿ ಪ.ಪಂ ಅಭಿವೃದ್ಧಿ ನಿಗಮದ ಅನುದಾನ ಕಡಿತ ಸರಿಪಡಿಸಲು ಒತ್ತಾಯ - Grant of the PMD Development Corporation
ರಾಜ್ಯ ಸರ್ಕಾರ ಕೊರೊನಾ ನೆಪವಾಗಿಟ್ಟುಕೊಂಡು ಮಹರ್ಷಿ ವಾಲ್ಮೀಕಿ ಪ.ಪಂ ಅಭಿವೃದ್ಧಿ ನಿಗಮದ ಅನುದಾನ ಕಡಿತ ಮಾಡಿರುವುದನ್ನು ಸರಿಪಡಿಸಬೇಕೆಂದು ಕರ್ನಾಟಕ ವಾಲ್ಮೀಕಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವ ನಾಯಕ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೊನಾ ನೆಪವಾಗಿಟ್ಟುಕೊಂಡು ಹಲವಾರು ಯೋಜನೆಗಳ ಅನುದಾನ ಕಡಿತಗೊಳಿಸುತ್ತಿದ್ದು, ಮಹರ್ಷಿ ವಾಲ್ಮೀಕಿ ಪ.ಪಂ ಅಭಿವೃದ್ಧಿ ನಿಗಮದ ಐರಾವತ, ಗಂಗಾ ಕಲ್ಯಾಣ, ಮಹಿಳಾ ಸಬಲೀಕರಣ ಸೇರಿದಂತೆ ಇತರೆ ಯೋಜನೆಗಳ ಅನುದಾನ ಕಡಿತ ಮಾಡಿರುವುದು ಸರಿಯಿಲ್ಲ. ಕೂಡಲೇ ಅದನ್ನು ಸರಿಪಡಿಸಬೇಕು ಎಂದಿದ್ದಾರೆ.
ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮಹರ್ಷಿ ವಾಲ್ಮೀಕಿ ಭವನದ ಕಾಮಗಾರಿಯನ್ನು ಮಹರ್ಷಿ ಜಯಂತಿಯೊಳಗೆ ಪೂರ್ಣಗೊಳಿಸಬೇಕು. ಪ.ಪಂ ವಸತಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಸ್ವಂತ ಕಟ್ಟಡ ನಿರ್ಮಿಸಿ ಮೂಲಭೂತ ಸೌಕರ್ಯ ನೀಡಬೇಕು ಎಂದರು.