ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಆರ್. ಬಸನಗೌಡ ತುರುವಿಹಾಳ ನೇತೃತ್ವದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಮುನ್ನುಡಿ ಬರೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಬಸನಗೌಡ ತುರುವಿಹಾಳ ಮುನ್ನುಡಿ ಬರೆದಿದ್ದಾರೆ: ಡಿ.ಕೆ ಶಿವಕುಮಾರ್ - ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್ ಸಿದ್ದತೆ
ಮಸ್ಕಿ ಉಪಚುನಾವಣೆ ಘೋಷಣೆ ಆದರೆ ಆರ್. ಬಸನಗೌಡ ಅವರ ಹೆಸರು ಶಿಫಾರಸ್ಸು ಮಾಡುವುದು ನಿಶ್ಚಿತ. ಅವರ ಪಕ್ಷ ಸೇರ್ಪಡೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯತೆಯನ್ನು ಸಾಕ್ಷಿಕರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮಸ್ಕಿಯಲ್ಲಿ ಆರ್. ಬಸನಗೌಡ ನೇತೃತ್ವ ಮತ್ತು ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ, ಲಿಂಗಸುಗೂರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸ್ವತಃ ಬಿಜೆಪಿ ಕಾರ್ಯಕರ್ತರೆ ಬಸನಗೌಡ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರನ್ನು ಕರೆ ತಂದು ಅದ್ದೂರಿ ಕಾರ್ಯಕ್ರಮ ಮಾಡಿರುವುದು ಹರ್ಷ ತಂದಿದೆ ಎಂದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಉಪಚುನಾವಣೆ ಘೋಷಣೆ ಆದರೆ ಆರ್. ಬಸನಗೌಡ ಅವರ ಹೆಸರು ಶಿಫಾರಸ್ಸು ಮಾಡುವುದು ನಿಶ್ಚಿತ. ಪಕ್ಷ ಸೇರ್ಪಡೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯತೆಯನ್ನು ಸಾಕ್ಷಿಕರಿಸಿದೆ ಎಂದು ಹೇಳಿದರು.