ರಾಯಚೂರು :ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.
ಮಾಸಿಕ ಕೆಡಿಪಿ ಸಭೆ: ಕಲಾಪ ವೀಕ್ಷಣೆಯಲ್ಲಿ ಬ್ಯುಸಿ ಅಧಿಕಾರಿಗಳು - undefined
ಇಂದು ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ಕರೆಯಲಾಗಿತ್ತು.ಆದರೆ, ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ವೀಕ್ಷಣೆಯಲ್ಲಿ ತೊಡಗಿದ್ದಂತಹ ದೃಶ್ಯಗಳು ಕಂಡು ಬಂದವು.
![ಮಾಸಿಕ ಕೆಡಿಪಿ ಸಭೆ: ಕಲಾಪ ವೀಕ್ಷಣೆಯಲ್ಲಿ ಬ್ಯುಸಿ ಅಧಿಕಾರಿಗಳು](https://etvbharatimages.akamaized.net/etvbharat/prod-images/768-512-3913392-thumbnail-3x2-raichur.jpg)
Raichur
ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ
ಇಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಜಿಲ್ಲೆಯ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿ ಎಂದು ಸಭೆಯನ್ನು ಕರೆದಿದ್ದರು. ಆದರೆ, ಇಂದು ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಕಲಾಪ ನಡೆಯುತ್ತಿದ್ದರಿಂದ ಅಧಿಕಾರಿಗಳೆಲ್ಲ ಮೊಬೈಲ್ ವೀಕ್ಷಣೆಯಲ್ಲಿ ಬ್ಯುಸಿಯಿದ್ದಂತಹ ದೃಶ್ಯಗಳು ಕಂಡು ಬಂದವು.
ಇತ್ತ ಕೆಲವು ಅಧಿಕಾರಿಗಳು ಸಭೆಯಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ ,ಯುವಜನ ಹಾಗೂ ಕ್ರೀಡಾ ಇಲಾಖೆಯ ಕುರಿತು ಚರ್ಚೆ ನಡೆಸುತ್ತಿದ್ದರೆ, ವಿವಿಧ ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು.