ಕರ್ನಾಟಕ

karnataka

ETV Bharat / state

ಬಂಡವಾಳ ಶಾಹಿ ಆಡಳಿತದಿಂದ ಕಾರ್ಮಿಕರು ಗುಲಾಮರಾಗಿದ್ದಾರೆ: ಹೆಚ್.ವಿ ದಿವಾಕರ್ - ರಾಯಚೂರು ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನದ

ಇಂದು ಜಿಲ್ಲೆಯ ಟಿಪ್ಪು ಗಾರ್ಡ​ನ್​ನಲ್ಲಿ ​ಎಐಯುಟಿಯುಸಿ ವತಿಯಿಂದ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಹಮ್ಮಿಕೊಳ್ಳಲಾಯಿತು.

ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನ

By

Published : Nov 23, 2019, 5:52 PM IST

ರಾಯಚೂರು: ಇಂದು ಜಿಲ್ಲೆಯ ಟಿಪ್ಪು ಗಾರ್ಡ​ನ್​ನಲ್ಲಿ ​ಎಐಯುಟಿಯುಸಿ ವತಿಯಿಂದ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಹಮ್ಮಿಕೊಳ್ಳಲಾಯಿತು.

ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನ

ಕಾರ್ಯಕ್ರಮವನ್ನು ಎಸ್.ಯು.ಸಿ.ಐ ನ ರಾಜ್ಯ ಸಮಿತಿ ಸದಸ್ಯ ಹೆಚ್.ವಿ ದಿವಾಕರ್ ಉದ್ಘಾಟಿಸಿ, ನಂತರ ಮಾತನಾಡಿದ ಅವರು, ದೇಶದಲ್ಲಿ‌ ಆಡಳಿತ ನಡೆಸುತ್ತಿರುವ ಎಲ್ಲಾ ಸರ್ಕಾರಗಳು ಕಾರ್ಮಿಕರು, ಮಹಿಳೆಯರ ಪರ ಕಾಳಜಿಯಿ ಇಲ್ಲದೇ ಬಂಡವಾಳ ಶಾಹಿ ಪರ ಆಡಳಿತ ನಡೆಸುತ್ತಿದೆ. ಕಾರ್ಮಿಕರು ಗುಲಾಮರಂತೆ ದುಡಿಯುತಿದ್ದು, ಶೋಷಣೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಗಳು ಬಂಡವಾಳಶಾಹಿ ಪರ ಕಾರ್ಮಿಕ ವಿರೋಧಿ, ಜನವಿರೋಧಿ ಆಡಳಿತ ನಡೆಸುತ್ತಿರುವ ಹಿನ್ನಲೆ ಅನೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ಇದರಿಂದ ಸಾವಿರ ಜನರು ನಿರುದ್ಯೋಗಿಗಳಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಅಂಗನವಾಡಿ, ಬಿಸಿಯೂಟ ಇತರೆ ಕಾರ್ಮಿಕರಿಗೆ ಕನಿಷ್ಟ ವೇತನ ನೀಡದೇ, ದುಡಿಸಿಕೊಳ್ಳುತ್ತಿದೆ. ಅವರ‌ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ, ಕೂಡಲೆ ಕನಿಷ್ಟ ವೇತನ ಜಾರಿ ಮಾಡಬೇಕು. ಹಾಗೂ ಇಎಸ್ಐ, ಪಿಎಫ್ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details