ರಾಯಚೂರು:ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಮೆಗಾ ಲೋಕ ಅದಾಲತ್ ನಡೆದಿದ್ದು,ಜಿಲ್ಲೆಯಲ್ಲಿದ್ದ ಸಿವಿಲ್, ಕ್ರಿಮಿನಲ್, ಬ್ಯಾಂಕ್ ವ್ಯಾಜ್ಯ, ಕೌಟುಂಬಿಕ ವ್ಯಾಜ್ಯ ಸೇರಿದಂತೆ ವಿವಿಧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು.
ಜಿಲ್ಲೆಯಲ್ಲಿ ಒಟ್ಟು 32 ಸಾವಿರ ಪ್ರಕರಣಗಳ ಪೈಕಿ 4,742 ವಿವಿಧ ಪ್ರಕರಣಗಳು ಇಂದು ಲೋಕ ಅದಾಲತ್ ಕೈಗೆತ್ತಿಕೊಳ್ಳಲಾಯಿತು. ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದು, ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳಿಂದ ವಿವಿಧ ಪ್ರಕರಣಗಳನ್ನು ಬಗೆಹರಿಸಲಾಯಿತು.
ಜಿಲ್ಲೆಯಲ್ಲಿ ನಡೆದ ಜಿಲ್ಲಾ ಮೆಗಾ ಲೋಕ ಅದಾಲತ್ ಈ ಮೆಗಾ ಲೋಕ ಅದಾಲತ್ ಕುರಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರ ರಾಮ 'ಈಟಿವಿಭಾರತ್'ನೊಂದಿಗೆ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯಾಗಿ ಮೆಗಾ ಲೋಕ ಅದಾಲತ್ ಕಾರ್ಯಕ್ರಮವನ್ನು ಆಚರಣೆ ಮಾಡುತ್ತ ಬಂದಿದ್ದೀವಿ.
ಇಂದು ಸಾಕಷ್ಟು ಸಾಕ್ಷಿದಾರರು ಬಂದಿದ್ದಾರೆ. ಅವರೆಲ್ಲರೊಂದಿಗೆ ಸೂಕ್ತ ಸಮಾಲೋಚನೆ ಮಾಡಿ ಪ್ರಕರಣಗಳನ್ನು ಬಗೆಹರಿಸಲಾಗುತ್ತಿದೆ. ಪರಸ್ಪರ ರಾಜಿ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ಅವಕಾಶ ಮಾಡಿದ್ದು, ಇದರಿಂದ ಸಮಯ ಹಾಗೂ ಹಣದ ಉಳಿತಾಯವಾಗಲಿದೆ. ಇಂದು 4,742 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಶೇ.60ರಷ್ಟು ಬಗೆಹರಿದಿವೆ ಎಂದು ಭರವಸೆ ವ್ಯಕ್ತಪಡಿಸಿದರು.