ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಂಡಾಗಳಿಂದ ದುಡಿಯಲು ಹೊರ ಹೋದವರು ಸದ್ಯ ತಮ್ಮ ವಾಸ ಸ್ಥಳಗಳಿಗೆ ವಾಪಸ್ ಆಗುತ್ತಿದ್ದು, ಸದ್ಯ ಇವರೆಲ್ಲರೂ ಕೊರೊನಾ ಹರಡುವ ಭೀತಿಗೆ ಒಳಗಾಗಿದ್ದು, ಜಿಲ್ಲಾಡಳಿತ ಆರೋಗ್ಯ ತಪಾಸಣೆಗೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ತಾಂಡಾ ಜನತೆಯ ಆರೋಗ್ಯ ರಕ್ಷಣೆಗೆ ಮುಂದಾಗದ ಜಿಲ್ಲಾಡಳಿತ: ಆರೋಪ - ದುಡಿಯಲು ಹೋದವರು ತಮ್ಮ ಮನೆಗಳಿಗೆ ವಾಪಸ್
ಲಿಂಗಸುಗೂರು ತಾಂಡಾಗಳಿಂದ ದುಡಿಯಲು ಹೋದವರು ತಮ್ಮ ಮನೆಗಳಿಗೆ ವಾಪಸ್ ಆಗುತ್ತಿದ್ದು, ತಾಂಡಾ ಜನತೆಯ ಆರೋಗ್ಯ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
![ತಾಂಡಾ ಜನತೆಯ ಆರೋಗ್ಯ ರಕ್ಷಣೆಗೆ ಮುಂದಾಗದ ಜಿಲ್ಲಾಡಳಿತ: ಆರೋಪ ತಾಂಡಾ ಜನತೆ](https://etvbharatimages.akamaized.net/etvbharat/prod-images/768-512-6520010-thumbnail-3x2-jifhigf.jpg)
ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆ ಗೋವಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ದುಡಿಯಲು ಹೋದವರು ಮರಳುತಿದ್ದಾರೆ. ಗೋನವಾಟ್ಲ ತಾಂಡಾದ ನಾಲ್ವರಿಗೆ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡಿದ್ದು ಜಿಲ್ಲಾಡಳಿತ ಗಮನಕ್ಕೆ ತಂದರು ಮುಂಜಾಗ್ರತೆ ವಹಿಸುತ್ತಿಲ್ಲ ಎಂಬುದು ತಾಂಡಾ ನಿವಾಸಿಗಳ ದೂರು.
ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ, ವಿದ್ಯಾರ್ಥಿನಿಯರು ಮನೆಗೆ ವಾಪಸ್:ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿರುವ ಎರಡು ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿನಿಯರು ಮನೆಗೆ ತೆರಳುತ್ತಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ದ್ವಿತೀಯ ಪಿಯು ಪರೀಕ್ಷೆಯನ್ನು ಮುಂದೂಡಲಾಗಿದೆ. ಹೀಗಾಗಿ ಹಾಸ್ಟಲ್ ಸಿಬ್ಬಂದಿ ಪಾಲಕರಿಗೆ ವಿಷಯವನ್ನು ತಿಳಿಸಿ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಸ್ ಸಂಚಾರ ಇರದ ಕಾರಣ ಪೋಷಕರು ಬೈಕ್ಗಳಲ್ಲಿ ಕರೆದುಕೊಂಡು ಹೋಗುವ ದೃಶ್ಯ ಕಂಡು ಬಂತು.