ರಾಯಚೂರು:ಅಂಗನವಾಡಿಗಳಿಗೆ ಪೂರೈಸುವ ಮೊಟ್ಟೆ ಹಾಗೂ ಆಹಾರ ಪದಾರ್ಥಗಳು ಗುಣಮಟ್ಟದ್ದಾಗಿರಬೇಕು. ಆದರೆ ನಗರದ 16ನೇ ವಾರ್ಡ್‌ನ ತಿಮ್ಮಾಪುರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆ, ಹುಳ ಬಿದ್ದಿರುವ ಶೇಂಗಾ ಪೂರೈಕೆಯಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆ, ಹುಳ ಹಿಡಿದ ಆಹಾರ ವಿತರಣೆ: ಸ್ಥಳೀಯರ ಆಕ್ರೋಶ - ಕೊಳೆತ ಮೊಟ್ಟೆ ವಿತರಣೆ
ಕೊಳೆತ ಮೊಟ್ಟೆ ಹಾಗೂ ಹುಳ ಹಿಡಿದ ಆಹಾರ ಪದಾರ್ಥ ವಿತರಣೆ ಮಾಡಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳೆತ ಮೊಟ್ಟೆ ವಿತರಣೆ..
ಪ್ರತಿ ತಿಂಗಳು ಇದೇ ರೀತಿಯಲ್ಲಿ ಕೊಳೆತ ಮೊಟ್ಟೆ, ಹುಳ ಬಿದ್ದ ಶೇಂಗಾ ಬೀಜ, ರಾಗಿ ಹಿಟ್ಟು ಪೂರೈಕೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯಕರ್ತೆ ಅಧಿಕಾರಿಗಳ ಕಡೆ ಬೊಟ್ಟು ಮಾಡಿದ್ದಾರೆ. ಪೂರೈಕೆಯ ವೇಳೆಯಲ್ಲೇ ಆಹಾರ ಪದಾರ್ಥಗಳು ಹಾಳಾಗಿವೆ. ನಾವೇನೂ ಮಾಡೋದು? ಎಂದು ಅಂಗನವಾಡಿ ಕಾರ್ಯಕರ್ತೆ ಹೇಳಿದರು.
ಇದನ್ನೂ ಓದಿ:ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ, ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ..