ರಾಯಚೂರು: ಕೃಷ್ಣಾ ನದಿಯಲ್ಲಿ ನೀರು ಕುಡಿಯುವ ವೇಳೆ ಮೊಸಳೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಶಾಸಕ ಬಸವನಗೌಡ ದದ್ದಲ್ ಪರಿಹಾರದ ಚೆಕ್ ವಿತರಿಸಿದ್ದಾರೆ.
ಮೊಸಳೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಪರಿಹಾರ ವಿತರಣೆ - Legislator Basavanagouda Daddal
ಮೊಸಳೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಶಾಸಕ ಬಸವನಗೌಡ ದದ್ದಲ್ 7.5 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ನೀಡಿದರು.
ಮೊಸಳೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಪರಿಹಾರ ವಿತರಣೆ
ತಾಲೂಕಿನ ಡಿ. ರಾಂಪೂರ ಗ್ರಾಮದ ಮಲ್ಲಿಕಾರ್ಜುನ (11) ಎನ್ನುವ ಬಾಲಕ ಮೊಸಳೆ ದಾಳಿಯಿಂದ ಮೃತಪಟ್ಟಿದ್ದ. ಸ್ನೇಹಿತರೊಂದಿಗೆ ನದಿಯಲ್ಲಿ ಇಳಿದು ನೀರು ಕುಡಿಯಲು ಹೋಗಿದ್ದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿತ್ತು.
ಮೃತ ಬಾಲಕನ ಮನೆಗೆ ತೆರಳಿದ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, 7.5 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್‌ನ್ನು ಬಾಲಕನ ತಂದೆ ರಾಜಪ್ಪನಿಗೆ ಹಸ್ತಾಂತರಿಸಿದರು.