ಕರ್ನಾಟಕ

karnataka

ETV Bharat / state

ಎನ್.ಎಸ್.ಬೋಸರಾಜ್ ಫೌಂಡೇಶನ್ ವತಿಯಿಂದ ರಂಜಾನ್ ಪ್ರಯುಕ್ತ ದಿನಸಿ ಕಿಟ್ ವಿತರಣೆ - ರಾಯಚೂರು

ಎನ್.ಎಸ್.ಬೋಸರಾಜ್ ಫೌಂಡೇಶನ್ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

Raichur
ಆಹಾರ ಪದಾರ್ಥಗಳ ಕಿಟ್ ವಿತರಣೆ

By

Published : May 23, 2020, 2:36 PM IST

ರಾಯಚೂರು: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನಗರದ ಬಡವರಿಗೆ ಎನ್.ಎಸ್.ಬೋಸರಾಜ್ ಫೌಂಡೇಶನ್ ವತಿಯಿಂದ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಎನ್.ಎಸ್.ಬೋಸರಾಜ್ ಫೌಂಡೇಶನ್ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಣೆ

ನಗರದ ಕೋಟೆ ತಲಾರ್ ಏರಿಯಾದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್ ಸಾಂಕೇತಿಕವಾಗಿ ಬಡವರಿಗೆ ಆಹಾರ ಪದಾರ್ಥಗಳ ಕಿಟ್​ಗಳನ್ನು ವಿತರಣೆ ಮಾಡಿದರು. ಹಬ್ಬಕ್ಕೆ ಬೇಕಾಗುವ ಆಹಾರ ಪದಾರ್ಥಗಳ ಒಂದು ಕಿಟ್ ತಯಾರಿಸಿ ಸುಮಾರು 5 ಸಾವಿರ ಆಹಾರ ಪದಾರ್ಥಗಳ ಕಿಟ್‌ಗಳನ್ನು ತಯಾರಿಸಲಾಗಿದೆ.

ನಗರದಾದ್ಯಂತ ಬಡವಣೆಗಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಇಂದು ಸಾಂಕೇತಿಕವಾಗಿ ನೀಡುವ ಮೂಲಕ ಹಂಚಿಕೆ ಮಾಡಲಾಯಿತು.

ABOUT THE AUTHOR

...view details