ಕರ್ನಾಟಕ

karnataka

ETV Bharat / state

ಅನರ್ಹಗೊಂಡ ಮಸ್ಕಿ ಶಾಸಕ: ಕಾರ್ಯಕರ್ತರಿಗೆ ವಿಡಿಯೋ ಸಂದೇಶ - ಮುಂಬೈನಲ್ಲಿದ್ದುಕೊಂಡು ಸಂದೇಶ

ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ ಗೌಡ ಪಾಟೀಲ್​ ಅನರ್ಹಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಕ್ಷೇತ್ರ ಹಾಗೂ ಜಿಲ್ಲೆಯ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಶಾಸಕ ಪ್ರತಾಪ ಗೌಡ ಪಾಟೀಲ್​

By

Published : Jul 28, 2019, 8:29 PM IST

ರಾಯಚೂರು:ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿದ್ದ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ ಗೌಡ ಪಾಟೀಲ್ ಅನರ್ಹಗೊಂಡ ಬೆನ್ನೆಲ್ಲೇ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಸ್ಪೀಕರ್ ಅವರು ನಮ್ಮನ್ನು ಅನರ್ಹಗೊಳಿಸಿದ್ದು ಗಮನಕ್ಕೆ ಬಂದಿದೆ. ಶೀಘ್ರವೇ ಸುಪ್ರೀಂಕೋರ್ಟ್ ಮೂಲಕ ಅದರ ವಿರುದ್ಧ ಹೋರಾಟ ಮಾಡುತ್ತೇವೆ ಹಾಗೂ ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.

ನನ್ನ ಕ್ಷೇತ್ರದ ಜನರು ಭಯ ಪಡುವ ಅಗತ್ಯವಿಲ್ಲ. ಶೀಘ್ರವೇ ಕ್ಷೇತ್ರಕ್ಕೆ ಬಂದು ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡುತ್ತೇನೆ ಎಂದು ಮುಂಬೈನಲ್ಲಿದ್ದುಕೊಂಡು ಸಂದೇಶ ರವಾನಿಸಿದ್ದಾರೆ.

ಶಾಸಕ ಪ್ರತಾಪ ಗೌಡ ಪಾಟೀಲ್​ ಅನರ್ಹ

ಪ್ರತಾಪ ಗೌಡ ಪಾಟೀಲ್ ಅತೃಪ್ತರ ಗುಂಪಿನಲ್ಲಿ ಕಾಣಿಸಿಕೊಂಡಾಗಿನಿಂದ ಜಿಲ್ಲೆ ಹಾಗೂ ಕ್ಷೇತ್ರದ ‌ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬರದ ನಡುವೆ ಕ್ಷೇತ್ರದಲ್ಲಿರಬೇಕಾದವರು, ಮುಂಬೈನಲ್ಲಿದ್ದುಕೊಂಡು ರಾಜಕೀಯ ಆಟ ಅಡುತ್ತಿದ್ದಾರೆ ಎಂದು ಟೀಕೆಗಳು ಕೂಡ ವ್ಯಕ್ತವಾಗಿದ್ದವು.

ABOUT THE AUTHOR

...view details