ಕರ್ನಾಟಕ

karnataka

ETV Bharat / state

ದ್ವೇಷದ ಸಂದೇಶ ರವಾನೆ: ಶಿಕ್ಷಕಿಯನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ - ಶಿಕ್ಷಕಿಯ ಅಮಾನತು ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ

ಸಾಮಾಜಿಕ ಜಾಲತಾಣದ ಮೂಲಕ ದೇಶದ ಶಾಂತಿಗೆ ಧಕ್ಕೆ, ಪಕ್ಷ ಹಾಗೂ ಧರ್ಮದ ಬಗ್ಗೆ ದ್ವೇಷ ಮನೋಭಾವನೆ ಉಂಟು ಮಾಡುವ ರೀತಿಯಲ್ಲಿ ಮೆಸ್ಸೇಜ್​​ ರವಾನಿಸಿದ ಆರೋಪದ ಮೇಲೆ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ಶಿಕ್ಷಕಿಯನ್ನು ಅಮಾನತುಗೊಳಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ
ಶಿಕ್ಷಕಿಯನ್ನು ಅಮಾನತುಗೊಳಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ

By

Published : Sep 1, 2020, 1:11 PM IST

ರಾಯಚೂರು: ದೇಶದ ಶಾಂತಿಗೆ ಧಕ್ಕೆ, ಪಕ್ಷ ಹಾಗೂ ಧರ್ಮದ ಬಗ್ಗೆ ದ್ವೇಷದ ಮನೋಭಾವನೆ ಉಂಟು ಮಾಡುವ ಸಂದೇಶವನ್ನು ವಾಟ್ಸ್​ಆ್ಯಪ್‌ನಲ್ಲಿ ಹಾಕಿರುವ ಆರೋಪದ ಮೇಲೆ ಶಿಕ್ಷಕಿಯನ್ನ ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಯಚೂರು ನಗರದ ಅದ್ರೂನ್ ಕಿಲ್ಲಾ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ಆಗಸ್ಟ್​ 23ರಂದು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ದೇಶದ ಶಾಂತಿಗೆ ಧಕ್ಕೆ, ಪಕ್ಷ ಹಾಗೂ ಧರ್ಮದ ಬಗ್ಗೆ ದ್ವೇಷ ಮನೋಭಾವನೆ ಉಂಟು ಮಾಡುವ ರೀತಿಯಲ್ಲಿ ಮೆಸ್ಸೇಜ್​ ರವಾನಿಸಲಾಗಿತ್ತು. ಅಷ್ಟೇ ಅಲ್ಲದೆ, ಪ್ರಧಾನಿಮಂತ್ರಿ, ರಕ್ಷಣಾ ಇಲಾಖೆ ಮುಖ್ಯಸ್ಥರು, ಗೃಹ ಸಚಿವರ ವಿರುದ್ಧ ಮತ್ತು ದೇಶದ ಘನ ಸರ್ವೋಚ್ಛ ನ್ಯಾಯಾಲಯದ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವದುರ್ಗದ ಅಮೀನ್ ಹಾಗೂ ಸಂತೋಷ್​ ಎಂಬುವರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಶಿಕ್ಷಕಿಯನ್ನು ಅಮಾನತುಗೊಳಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ

ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ‌ ನಾಗರಿಕ ಸೇವಾ( ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನಿಯ) ನಿಯಮಗಳು, 1957 ರ 10(1)(ಡಿ) ಪ್ರದತ್ತವಾದ ಅಧಿಕಾರವನ್ನ ಬಳಸಿಕೊಂಡು ಶಿಕ್ಷಕಿಯ ಬೇಜಾವಾಬ್ದಾರಿತನ ಮತ್ತು ಕರ್ತವ್ಯ ಲೋಪದಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೋನಾಳ ಅಮಾನತುಗೊಳಿಸಿ‌, ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details