ರಾಯಚೂರು: ಆಂಧ್ರ-ಕರ್ನಾಟಕ ಸಂಪರ್ಕ ಕಲ್ಪಿಸುವ ಕೃಷ್ಣಾ ಸೇತುವೆಯ ಶಕ್ತಿನಗರದ ಬಳಿ ಡೀಸೆಲ್ ಟ್ಯಾಂಕರ್ವೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗ ಧಗನೇ ಉರಿದಿರುವ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಕೃಷ್ಣಾ ನದಿ ಸೇತುವೆ ಮೇಲೆ ಧಗ ಧಗನೇ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್! - ಕೃಷ್ಣಾ ಸೇತುವೆ ಬಳಿ ಬೆಂಕಿ ಅವಗಡ
ರಾಯಚೂರಿನ ಶಕ್ತಿನಗರ(ದೇವಸೂಗೂರು)ದ ಬಳಿ ಬರುವ ಕೃಷ್ಣಾ ಸೇತುವೆ ಮೇಲೆ ಡೀಸೆಲ್ ಟ್ಯಾಂಕರ್ವೊಂದು ಧಗ ಧಗನೇ ಉರಿದಿರುವ ಘಟನೆ ನಡೆದಿದೆ.
ತಾಲೂಕಿನ ಶಕ್ತಿನಗರ(ದೇವಸೂಗೂರು)ದ ಬಳಿ ಬರುವ ಕೃಷ್ಣಾ ಸೇತುವೆ ಮೇಲೆ ಈ ಅವಘಡ ನಡೆದಿದೆ. ಇದು ಡೀಸೆಲ್ ಸಾಗಿಸುವ ಟ್ಯಾಂಕರ್ ಆಗಿದ್ದು, ಡಿಸೇಲ್ ಖಾಲಿ ಮಾಡಿಕೊಂಡು ಟ್ಯಾಂಕರ್ ಕರ್ನಾಟಕದ ಕಡೆ ಬರುವ ವೇಳೆ ಬೆಂಕಿ ತಗುಲಿದೆ. ಟ್ಯಾಂಕರ್ಗೆ ಬೆಂಕಿ ಹತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ಕೆಳಗಿಳಿದು ಹೊರಗಡೆ ಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೃಷ್ಣಾ ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪರಿಣಾಮ ಕೆಲ ಗಂಟೆಗಳ ಕಾಲ ಎರಡು ಕಡೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ ಬಳಿಕ, ಪೊಲೀಸರು ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.