ಲಿಂಗಸೂಗೂರು: ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸುವ ಭಕ್ತರು ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಅಮರೇಶ್ವರ ದೇವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಸಲಹೆ ನೀಡಿದರು.
ಕೊರೊನಾ ಹರಡದಂತೆ ಭಕ್ತ ಸಮೂಹ ಎಚ್ಚರಿಕೆ ವಹಿಸಬೇಕು : ಅಭಿನವ ಗಜದಂಡ ಶಿವಾಚಾರ್ಯರು - Lingasuguru Latest News Update
ಧಾರ್ಮಿಕ ಆಚರಣೆಗಳಲ್ಲಿ ಭಕ್ತರು ಮೈಮರೆಯಬಾರದು. ಕೊರೊನಾ ಭೀತಿ ಇರುವುದರಿಂದ ಜನರು ಎಚ್ಚರಿಕೆ ವಹಿಸಿ ಎಂದು ಅಭಿನವ ಗಜದಂಡ ಶಿವಾಚಾರ್ಯರು ಕಿವಿಮಾತು ಹೇಳಿದರು.
ಕೊರೊನಾ ವೈರಸ್ ಹರಡದಂತೆ ಭಕ್ತ ಸಮೂಹ ಎಚ್ಚರಿಕೆ ವಹಿಸಬೇಕು: ಅಭಿನವ ಗಜದಂಡ ಶಿವಾಚಾರ್ಯರು
ದೀಪಾವಳಿ ಪಾಡ್ಯದಂದು ಕಂಕಣ ಕಟ್ಟುವ ಮೂಲಕ ಕಾರ್ತಿಕೋತ್ಸವ ಆಚರಣೆ ಆರಂಭಗೊಳ್ಳುತ್ತದೆ. ಚಟ್ಟಿ ಅಮಾವಾಸ್ಯೆಯ 5ನೇ ದಿನ ದೀಪೋತ್ಸವ ಹಾಗೂ 6ನೇ ದಿನ ಉತ್ಸವ ಆಚರಣೆಗಳು ಜರುಗುತ್ತವೆ. ಆನಂತರ ತಿಂಗಳು ಪೂರ್ತಿ ವಿವಿಧ ಆಚರಣೆಗಳು ನೆರವೇರುತ್ತವೆ.
ಪ್ರಸಕ್ತ ವರ್ಷ ಕೊರೊನಾ ಭೀತಿಯಿಂದ ಕಾರ್ತಿಕೋತ್ಸವ ರದ್ದುಪಡಿಸಲಾಗಿದೆ. ದೇವಸ್ಥಾನ ಸಮಿತಿ, ಅರ್ಚಕರು, ಸಂಸ್ಥಾನಿಕರ ಸಹಯೋಗದಲ್ಲಿ ಸಾಂಪ್ರದಾಯಿಕ ಆಚರಣೆ ಮಾತ್ರ ನಿಯಮಿತವಾಗಿ ನಡೆಸಿಕೊಂಡು ಬರಲಾಗಿದೆ ಎಂದು ಶ್ರೀಗಳು ತಿಳಿಸಿದರು.