ರಾಯಚೂರು: ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳಗಳನ್ನು ಕಾಪಾಡುವುದರ ಜೊತೆಗೆ ಪ್ರವಾಸಿ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರ ಸಂಖ್ಯೆ ಹೆಚ್ಚು ಮಾಡಬೇಕೆಂದು ಪ್ರವಾಸೋದ್ಯಮ ಇಲಾಖೆಯ ಡಿಸಿ ವೆಂಕಟೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಿ, ಜನರನ್ನು ಆಕರ್ಷಿಸಿ: ರಾಯಚೂರು ಡಿಸಿ ಸೂಚನೆ - ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಿ,ಜನರನ್ನು ಆಕರ್ಷಿಸಿ:ಅಧಿಕಾರಿಗಳಿಗೆ ರಾಯಚೂರು ಡಿಸಿ ಸೂಚನೆ
ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಯಾತ್ರಿ ನಿವಾಸದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಿಂಧನೂರಿನ ಸೋಮನಾಥ ದೇವಸ್ಥಾನದ ಯಾತ್ರಿ ನಿವಾಸಕ್ಕೆ ಶೌಚಾಲಯ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಪ್ರವಾಸಿ ಇಲಾಖೆಯದ್ದಾಗಿದೆ. ಟೀಕೆಗೆ ಗುರಿಯಾಗುತ್ತಿರುವ ಇಲಾಖೆಗೆ ಅಗತ್ಯ ಸೌಲಭ್ಯ ನೀಡಿ ಜನರನ್ನು ಆಕರ್ಷಿಸಬೇಕೆಂದರು.
ಸರ್ಕಾರದ ವಿವಿಧ ಯೋಜನೆಗಳಡಿ ಟ್ಯಾಕ್ಸಿ ಚಾಲಕರಿಗೆ ಸೌಲಭ್ಯ ಒದಗಿಸಬೇಕು, ಟ್ಯಾಕ್ಸಿ ಬದಲು ಆಟೋ ನೀಡಬಹುದೇ ಎಂದು ಪರಿಶೀಲಿಸಿ ಯೂನಿಯನ್ ಜೊತೆ ಚರ್ಚಿಸಬೇಕು. ತಂತ್ರಜ್ಞಾನ ಮುಂದುವರೆದ ಕಾರಣ ಅದಕ್ಕೆ ತಕ್ಕಂತೆ ಪರಿಸರ ಸ್ನೇಹಿಯಾದ ಚಾರ್ಜಿಂಗ್ ಆಟೋ ನೀಡಲು ಗಮನಹರಿಸಿ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.