ಕರ್ನಾಟಕ

karnataka

ETV Bharat / state

ಉಂಡ ಮನೆಯ ಜಂತಿ ಎಣಿಸಿದ ಲಾರಿ ಚಾಲಕ ಈಗ ಪೊಲೀಸರ ಅತಿಥಿ! - Sadar Bazaar Station, Raichur

ಲಾರಿ ಚಾಲಕನೊಬ್ಬ ತಾನು ಕೆಲಸಕ್ಕಿದ್ದ ಮಾಲೀಕನ ಲಾರಿಯನ್ನು ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

dsd
ಲಾರಿ ಕಳ್ಳನ ಬಂಧನ

By

Published : Jan 21, 2021, 7:41 PM IST

ರಾಯಚೂರು: ತಾನು ಚಲಾಯಿಸುತ್ತಿದ್ದ ಲಾರಿಯನ್ನೇ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಾರಿ ಕಳ್ಳನ ಬಂಧನ

ನಗರದ ಆಶ್ರಯ ಕಾಲೋನಿ ನಿವಾಸಿ ಗೋವಿಂದ ಬಂಧಿತ ಆರೋಪಿ. ಈತ ಸೈಯದ್ ಹುಸೇನ್ ಎಂಬುವರ ಬಳಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹಣದಾಸೆಗೆ ಕೆಲಸ ನೀಡಿದ ಮಾಲೀಕನ ಲಾರಿಯನ್ನೇ ಕದ್ದು ಪರಾರಿಯಾಗಿದ್ದ.

ಈ ಸಂಬಂಧ ಲಾರಿ ಮಾಲೀಕ ಸೈಯದ್ ಹುಸೇನ್ ಸದರ್ ಬಜಾರ್ ಠಾಣೆ ದೂರು ನೀಡಿದ್ದರು. ಈ ಕುರಿತು ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಗೋವಿಂದನನ್ನು ಸೆರೆ ಹಿಡಿದು 8 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದೆ.

ABOUT THE AUTHOR

...view details