ರಾಯಚೂರು:ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಹಿಂದೆ ಸಾಲು ಸಾಲು ಕಾಂಡೋಮ್ ಪ್ಯಾಕೇಟ್ಗಳು ಪತ್ತೆಯಾಗಿವೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ತೀವ್ರ ಮುಜುಗರ ತರಿಸಿದೆ.
ರಾಯಚೂರು ಜಿಲ್ಲಾ ಕ್ರೀಡಾಂಗಣದ ಹಿಂದೆ ರಾಶಿ ರಾಶಿ ಕಾಂಡೋಮ್ ಪ್ಯಾಕೇಟ್ ಪತ್ತೆ..
ಜಿಲ್ಲಾ ಕ್ರೀಡಾಂಗಣದ ಹಿಂದಿನ ರೈಲ್ವೆ ಟ್ರ್ಯಾಕ್ ಹತ್ತಿರ ರಾಶಿ ರಾಶಿ ಬಳಕೆಯಾಗದ ಕಾಂಡೋಮ್ ಪ್ಯಾಕೇಟ್ಗಳು ಪತ್ತೆಯಾಗಿವೆ. ಇದನ್ನ ಕಂಡ ಪ್ರತಿಷ್ಠಿತ ಬಡಾವಣೆಯಾದ ನಿಜಲಿಂಗಪ್ಪ ಕಾಲೋನಿಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದ ಹಿಂದಿನ ರೈಲ್ವೆ ಟ್ರ್ಯಾಕ್ ಹತ್ತಿರ ರಾಶಿ ರಾಶಿ ಬಳಕೆಯಾಗದ ಕಾಂಡೋಮ್ ಪ್ಯಾಕೇಟ್ಗಳು ಪತ್ತೆಯಾಗಿವೆ. ಇದಕ್ಕೆ ಇಲ್ಲಿನ ಪ್ರತಿಷ್ಠಿತ ಬಡಾವಣೆಯಾದ ನಿಜಲಿಂಗಪ್ಪ ಕಾಲೋನಿಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಟೇಡಿಯಂನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆಯೇ ಎಂಬ ಶಂಕೆ ಮೂಡಿಸಿದೆ. ಆದರೆ, ಬಳಕೆಯಾಗಿಲ್ಲದಿರುವ ಇಷ್ಟೊಂದು ಕಾಂಡೋಮ್ ಪ್ಯಾಕೇಟ್‌ಗಳನ್ನ ಯಾರು ಅದು ಗ್ರೌಂಡ್‌ನ ಹಿಂಬದಿಯೇ ಎಸೆದು ಹೋಗಿದ್ದಾರೆಂಬುದು ತಿಳಿಯುತ್ತಿಲ್ಲ. ಈ ರೈಲ್ವೆ ಟ್ರ್ಯಾಕ್‌ಗೆ ಹೊಂದಿಕೊಂಡು ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ ಹಾಗೂ ಪಕ್ಕದಲ್ಲಿ ಖಾಸಗಿ ಶಾಲೆಗಳಿವೆ. ಸರಿಯಾದ ಬೀದಿ ದೀಪಗಳನ್ನೂ ಅಳವಡಿಸಿಲ್ಲ. ಕುಡುಕರ ಹಾವಳಿಯೂ ಈ ಪ್ರದೇಶದಲ್ಲಿ ಹೆಚ್ಚಿದೆ. ವಿದ್ಯಾರ್ಥಿಗಳು ಕೂಡ ಇದೇ ಮಾರ್ಗವಾಗಿ ಸಂಚರಿಸ್ತಾರೆ. ಹಾಗಾಗಿ ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.