ರಾಯಚೂರು:ಅಂಗನವಾಡಿ ಕೇಂದ್ರಗಳನ್ನು ಎಲ್ಕೆಜಿ ಯುಕೆಜಿ ಗಳನ್ನಾಗಿ ಪರಿವರ್ತಿಸಲು, ಮೇ 17 2019 ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ರದ್ದುಪಡಿಸಲು ಒತ್ತಾಯಿಸಿ ಡಿಸೆಂಬರ್ 2 ರಿಂದ 10ರವರೆಗೆ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಹೆಚ್ ಪದ್ಮ ತಿಳಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಡಿ.2ರಿಂದ ಅಂಗನವಾಡಿ ನೌಕರರಿಂದ ಪ್ರತಿಭಟನೆ
ಅಂಗನವಾಡಿ ಕೇಂದ್ರಗಳನ್ನು ಎಲ್ಕೆಜಿ ಯುಕೆಜಿ ಗಳನ್ನಾಗಿ ಪರಿವರ್ತಿಸಲು, ಮೇ 17 2019 ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ರದ್ದುಪಡಿಸಲು ಒತ್ತಾಯಿಸಿ ಡಿಸೆಂಬರ್ 2 ರಿಂದ 10ರವರೆಗೆ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಹೆಚ್ ಪದ್ಮ ತಿಳಿಸಿದರು.
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದ್ದು, ತುಮಕೂರಿನಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾ ನಂತರ ಡಿ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದರು. ಈ ಹೋರಾಟದ ಭಾಗವಾಗಿ ಡಿಸೆಂಬರ್ 2 ರಿಂದ ವಿಭಾಗೀಯ ಮಟ್ಟದ ಪ್ರಚಾರ ಆಂದೋಲನ, ಜಾಥಾಗಳು ಹಮ್ಮಿಕೊಂಡಿದ್ದು ಡಿ.2 ರಂದು ಗುಲ್ಬರ್ಗಾ ವಿಭಾಗೀಯ ಮಟ್ಟದ ಜಾಥಾ, 3 ರಂದು ಕೊಪ್ಪಳ, 4 ರಂದು ರಾಯಚೂರಿಗೆ ಜಾಥಾ ಆಗಮಿಸಲಿದೆ ಎಂದರು.
10 ರಂದು ಅಂತಿಮವಾಗಿ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಈ ಹೋರಾಟದ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದರು.