ಕರ್ನಾಟಕ

karnataka

ETV Bharat / state

ನೆರೆ ಪರಿಹಾರ ಬಂದೇ ಬರುತ್ತೆ: ಉಮೇಶ್​ ಜಾಧವ್​​ ವಿಶ್ವಾಸ - flood relief fund will declare

ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಬಾರದ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಉಮೇಶ್​ ಜಾಧವ್​​, ಖಂಡಿತವಾಗಿಯೂ ಕೇಂದ್ರ ಸರ್ಕಾರದಿಂದ ಪರಿಹಾರ ಬರುತ್ತೆ. ಸ್ವಲ್ಪ ವಿಳಂಬವಾಗಿದೆ ಆದರೆ ಪರಿಹಾರ ಬರುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಉಮೇಶ್​​ ಜಾಧವ್​​

By

Published : Oct 4, 2019, 3:38 PM IST

ರಾಯಚೂರು: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ನೆರೆ ಪರಿಹಾರ ಶೀಘ್ರದಲ್ಲಿ ಬರಲಿದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್​​ ಹೇಳಿದ್ದಾರೆ.

ಉಮೇಶ್​​ ಜಾಧವ್​​

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನ ಕೇಂದ್ರ ಸರಕಾರ ತಿರಸ್ಕರಿಸಿಲ್ಲ. ನೆರೆ ಪರಿಹಾರದ ಬಗ್ಗೆ ಹಣಕಾಸು ಸಚಿವರು ವಿಚಾರಿಸುತ್ತಿದ್ದಾರೆ. ಪರಿಹಾರ ಬಂದೇ ಬರಲಿದ್ದು, ಸ್ವಲ್ಪ ವಿಳಂಬವಾಗಿದೆ. ಸ್ವ-ಪಕ್ಷದವರಿಂದಲೇ ಕೇಂದ್ರ ಸರಕಾರ ನಡೆಗೆ ವಿರೋಧಿಸಿದ್ದಾರೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಪ್ರಜಾಪ್ರಭುತ್ವ ಪಕ್ಷವಾಗಿದೆ. ಆದ್ದರಿಂದ ತಮ್ಮ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಅದಷ್ಟು ಬೇಗ ಕೇಂದ್ರದಿಂದ ನೆರೆ ಪರಿಹಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details