ರಾಯಚೂರು: ರಾಜ್ಯಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಿಸಲಾಯಿತು. ನರಕ ಚತುರ್ದಶಿಯ ಪ್ರಯುಕ್ತ ಇಂದು ಮಂತ್ರಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ದೀಪಾವಳಿ ಸಂಭ್ರಮ, ವಿಶೇಷ ಪೂಜೆ - Deepavali at Manthralaya Raghavendraswamy math
ರಾಯಚೂರಿನ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
Published : Nov 12, 2023, 11:59 AM IST
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಕಾರ್ತಿಕ ಮಂಗಳಾರತಿಯೊಂದಿಗೆ ಪೂಜೆ ಆರಂಭಿಸಲಾಯಿತು. ಮೂಲರಾಮ ದೇವರು, ರಾಯರು ಮತ್ತು ಇತರ ಬೃಂದಾವನಗಳಿಗೆ ವಿಶೇಷ ಮಹಾ ಮಂಗಳಾರತಿ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ ತೈಲ ಅಭ್ಯಂಜನ, ತುಳಸಿ ಪೂಜೆ ಮತ್ತು ಗೋಪೂಜೆ ನಡೆದವು. ಬಳಿಕ ಉಂಜಾಳ ಮಂಟಪದಲ್ಲಿ ವಿಶೇಷ ನಾರೀಕೃತ ನೀರಾಜನ ಹಾಗೂ ತೈಲಾಭ್ಯಂಜನ ಕಾರ್ಯಕ್ರಮ ನಡೆಯಿತು. ನಂತರ ಪೀಠಾಧಿಪತಿಗಳು ಭಕ್ತರಿಗೆ ಅನುಗ್ರಹ ಸಂದೇಶ ನೀಡಿ ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು.
ಇದನ್ನೂ ಓದಿ :ರಾಯರಮಠದ ಪರ ಹೈಕೋರ್ಟ್ ತೀರ್ಪು.. ಆನೆಗೊಂದಿ ನವವೃಂದಾವನಗಡ್ಡೆಯಲ್ಲಿ ವಿವಿಧ ಪೂಜೆ ನೆರವೇರಿಸಿದ ಭಕ್ತರು