ಕರ್ನಾಟಕ

karnataka

ETV Bharat / state

ಮಂತ್ರಾಲಯ: ರಾಯರ ಬೃಂದಾವನ ದರ್ಶನಕ್ಕೆ ಜೂನ್ 15ರ ಬಳಿಕ ಅನುವು

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ಬೃಂದಾವನದ ದರ್ಶನಕ್ಕೆ ಭಕ್ತರಿಗೆ ಜೂ.15ರ ಬಳಿಕ ಅನುವು ಮಾಡಿಕೊಡಲು ಶ್ರೀಮಠ ತೀರ್ಮಾನಿಸಿದೆ.

Raichur
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠ

By

Published : Jun 7, 2020, 2:08 PM IST

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ಬೃಂದಾವನದ ದರ್ಶನಕ್ಕೆ ಭಕ್ತರಿಗೆ ಜೂ.15ರ ಬಳಿಕ ಅನುವು ಮಾಡಿಕೊಡಲು ಮಠ ತೀರ್ಮಾನಿಸಿದೆ.

ಆಂಧ್ರಪ್ರದೇಶದ ಮುಜರಾಯಿ ಇಲಾಖೆ ನಿರ್ದೇಶನದ ಅನುಸಾರ ಮೊದಲಿಗೆ ಪ್ರಾಯೋಗಿಕವಾಗಿ ಜೂನ್ 8ರಿಂದ ಮಠದ ಸಿಬ್ಬಂದಿ, ಅವರ ಕುಟುಂಬ ಸದಸ್ಯರು, ಮಂತ್ರಾಲಯದ ಗ್ರಾಮಸ್ಥರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿ, ಅದರಲ್ಲಿ ಬದಲಾವಣೆ ಅವಶ್ಯವಿದ್ದರೆ ಸರಿಪಡಿಸಿಕೊಳ್ಳುವ ಮೂಲಕ ಜೂ.15ರ ನಂತರ ಇತರ ಭಕ್ತರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠ

ಭಕ್ತರಿಗೆ ಕೇವಲ ರಾಯರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದ್ದು ಪ್ರದಕ್ಷಿಣೆ, ಉರುಳು ಸೇವೆ, ತೀರ್ಥ, ಮಂತ್ರಾಕ್ಷತೆ, ಪ್ರಸಾದ, ಮುದ್ರಾ ಪ್ರದಾನ, ಪಾದಪೂಜೆಗೆ ಅವಕಾಶ ಇರುವುದಿಲ್ಲ. ಅರ್ಜಿತ ಸೇವೆಗಳನ್ನು ಪರೋಕ್ಷ ಪದ್ಧತಿಯಲ್ಲಿ ನಿರ್ವಹಿಸಲಾಗುತ್ತಿದ್ದು, ಗರ್ಭಗುಡಿಯೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

ರಾಯರ ದರ್ಶನಕ್ಕೆ ಬರುವಂತಹ ಭಕ್ತರು ಕಡ್ಡಾಯವಾಗಿ ಆಧಾರ್ ಸೇರಿದಂತೆ ಇನ್ನಿತರ ಗುರುತಿನ ಚೀಟಿ ತರುವುದು, ಮೊಬೈಲ್ ಸಂಖ್ಯೆ ನೀಡುವುದು ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯವೆಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details