ರಾಯಚೂರು:ಜಾಗದ ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಜಾಗದ ವಿಚಾರವಾಗಿ ಮನಸ್ತಾಪ.. ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ - ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ದೂರು ದಾಖಲು
ಜಾಗದ ವಿಚಾರವಾಗಿ ಮನಸ್ತಾಪ ಉಂಟಾಗಿ ವ್ಯಕ್ತಿಯೋರ್ವನ ಮೇಲೆ ಐವರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ನಗರದ ಆಶ್ರಯ ಕಾಲೋನಿ ಬಳಿ ಜರುಗಿದ ಘಟನೆಯಲ್ಲಿ ಬಸವರಾಜ ಎಂಬುವರು ಗಾಯಗೊಂಡಿದ್ದು,ಅವರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ಆಶ್ರಯ ಕಾಲೋನಿ ಬಳಿ ಶ್ರೀ ಆಂಜನೇಯ ದೇವಾಲಯದ ಬಳಿಯ ಜಾಗದ ವಿಚಾರವಾಗಿ ಮನಸ್ತಾಪವಿತ್ತು. ಈ ಹಿನ್ನೆಲೆ ಬಸವರಾಜ ಬೈಕ್ ಮೇಲೆ ತೆರಳುವ ವೇಳೆ ಅವರ ಮೇಲೆ ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಲಾಗಿದೆ.
ಇದರಿಂದ ಬಸವರಾಜ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ಮೇಲೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.