ಕರ್ನಾಟಕ

karnataka

ETV Bharat / state

ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಬಾಲಕನ ಶವ ಪತ್ತೆ:ಕೊಲೆ ಶಂಕೆ - Dead body was found in raichuru

ನಾಪತ್ತೆಯಾಗಿದ್ದ ಬಾಲಕ ರಾಯಚೂರು ಜಿಲ್ಲೆಯ ಸಿಂಧನೂರು ಬಳಿಯ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ..

fds
ಬಾಲಕನ ಶವ ಪತ್ತೆ

By

Published : Oct 25, 2020, 2:14 PM IST

ಕೊಪ್ಪಳ: ದುಷ್ಕರ್ಮಿಗಳು ಬಾಲಕನ‌ ಕೈ ಕಾಲು‌ ಕಟ್ಟಿ ತುಂಗಭದ್ರಾ ಎಡದಂಡೆ ನಾಲೆಗೆ ಎಸೆದಿರುವ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.

ಬಾಲಕನ ಶವ ಪತ್ತೆ

ಬಾಲಕನ‌ ಮೃತದೇಹ ರಾಯಚೂರು ಜಿಲ್ಲೆಯ ಸಿಂಧನೂರು ಬಳಿಯ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಪತ್ತೆಯಾಗಿದೆ. ಕಾರಟಗಿ ಪಟ್ಟಣದ ನಜೀರ್ ಕಾಲೋನಿ ನಿವಾಸಿಯಾಗಿರುವ ಹತ್ತು ವರ್ಷದ ಬಾಲಕ ಮಲ್ಲಿಕಾರ್ಜುನ ಎಂಬಾತನನ್ನು ದುಷ್ಕರ್ಮಿಗಳು ಕೈ-ಕಾಲು ಕಟ್ಟಿ ತುಂಗಭದ್ರಾ ಎಡದಂಡೆ ಕಾಲುವೆಗೆ ಎಸೆದಿದ್ದಾರೆ.

ಬಾಲಕನಿಗೆ ಈಜು ಬರುತ್ತೆ ಎಂಬುದು ಗೊತ್ತಿದ್ದೇ ಆತನ ಕೈ ಕಾಲು ಕಟ್ಟಿ ಕಾಲುವೆಗೆ ಎಸೆದಿದ್ದಾರೆ. ಬಾಲಕ ಮಲ್ಲಿಕಾರ್ಜುನ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಈ ಕುರಿತಂತೆ ಬಾಲಕನ ಪೋಷಕರು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ABOUT THE AUTHOR

...view details