ರಾಯಚೂರು: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ(ಕಂಡಕ್ಟರ್)ನ ಶವ ಪತ್ತೆಯಾದ ಘಟನೆ ಜಿಲ್ಲೆಯ ಲಿಂಗಸೂಗೂರು ಬಳಿ ನಡೆದಿದೆ.
ನೇಣುಬಿಗಿದ ಸ್ಥಿತಿಯಲ್ಲಿ ನಿರ್ವಾಹಕನ ಶವ ಪತ್ತೆ : ಆತ್ಮಹತ್ಯೆ ಶಂಕೆ - ಲಿಂಗಸೂಗೂರು ಬಸ್ ನಿರ್ವಾಹಕ ಆತ್ಮಹತ್ಯೆ
ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಹಳ್ಳದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಶವ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಿಂಗಸೂಗೂರು ಬಸ್ ನಿರ್ವಾಹಕ ಆತ್ಮಹತ್ಯೆ
ಲಿಂಗಸೂಗೂರು ಪಟ್ಟಣದ ಶ್ರೀ ಲಕ್ಷ್ಮೀ ದೇವಾಲಯ ಬಳಿಯ ಹಳ್ಳದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೃತರನ್ನು ಯಲಬುರ್ಗಾ ಡಿಪೋ ಬಸ್ ಕಂಡಕ್ಟರ್ ಈರಪ್ಪ ಉಪ್ಪಾರ ಎಂದು ಗುರುತಿಸಲಾಗಿದೆ.
ಘಟನೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಲಿಂಗಸೂಗೂರು ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.