ಕರ್ನಾಟಕ

karnataka

ETV Bharat / state

ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿವೆ: ಡಿಸಿಎಂ ಲಕ್ಷ್ಮಣ ಸವದಿ - ರಾಯಚೂರು

ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಲಿದೆ. ಆದ್ರೆ ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ.

DCM Lakshman Savadi
ಡಿಸಿಎಂ ಲಕ್ಷ್ಮಣ ಸವದಿ

By

Published : Jan 26, 2021, 4:06 PM IST

ರಾಯಚೂರು:ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದರು. ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಲಿದೆ. ಆದ್ರೆ ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಡಿಸಿಎಂ ಲಕ್ಷ್ಮಣ ಸವದಿ

ಇದೇ ವೇಳೆ ಮಾತನಾಡಿದ ಶಾಸಕ ಡಾ. ಶಿವರಾಜ್ ಪಾಟೀಲ್, ರಾಯಚೂರು ತಾಲೂಕಿನ 18 ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರ 200 ಕೋಟಿ ರೂಪಾಯಿ ಮಂಜೂರಾತಿ ನೀಡಿದೆ. ಕೃಷ್ಣ ನದಿಯ ಮಳೆಯಿಂದ ಹರಿಯುವ ಹೆಚ್ಚುವರಿ ನೀರಿನಿಂದ ಕೆರೆ ತುಂಬಿಸುವ ಮೂಲಕ ಜಲಮೂಲ ಹೆಚ್ಚಿಸಲು, ಕುಡಿಯುವ ನೀರು ಪೂರೈಸಲು ಅನುಕೂಲವಾಗಲಿದೆ ಎಂದರು.

ABOUT THE AUTHOR

...view details