ಕರ್ನಾಟಕ

karnataka

ETV Bharat / state

ಶಾಲೆ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ವೈರ್​ ತೆರವು... ಇದು ಈಟಿವಿ ಭಾರತ್ ಇಂಪ್ಯಾಕ್ಟ್ - etv bharat impact on sindhunuru school problem

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮೂರನೇ ಮೈಲ್ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ಹೈಟೆನ್ಷನ್ ವೈರನ್ನ ತೆರವು ಮಾಡಲಾಗಿದೆ.

impact
ಈಟಿವಿ ಭಾರತ್ ಇಂಪ್ಯಾಕ್ಟ್

By

Published : Dec 2, 2019, 4:01 PM IST

Updated : Dec 2, 2019, 7:30 PM IST

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮೂರನೇ ಮೈಲ್ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ಹೈಟೆನ್ಷನ್ ವೈರನ್ನ ತೆರವು ಮಾಡಲಾಗಿದೆ.

ಈಟಿವಿ ಭಾರತ್​​​ನಲ್ಲಿ 2019 ನವೆಂಬರ್​​ 29ರಂದು ''ಬಲಿಗಾಗಿ ಬಾಯ್ತೆರೆದು ನಿಂತ ಹೈಟೆನ್ಷನ್​ ವಿದ್ಯುತ್​ ವೈರ್​... ಜೀವ ಭಯದಲ್ಲೇ ಮಕ್ಕಳ ವಿದ್ಯಾಭ್ಯಾಸ..'' ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.

ಈಟಿವಿ ಭಾರತ್ ಇಂಪ್ಯಾಕ್ಟ್

ಈ ವರದಿಯಿಂದ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಶಾಲೆಯ ಕಟ್ಟಡದ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ಹೈಟೆನ್ಷನ್ ವೈರನ್ನ ತೆರವುಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವಭಯ ದೂರವಾಗುವಂತೆ ಮಾಡಿದ್ದಾರೆ.ಇನ್ನು ವರದಿ ಪ್ರಸಾರ ಮಾಡಿ ವಿದ್ಯುತ್ ಹೈಟೆನ್ಷನ್ ವೈರ್ ತೆರವುಗೊಳಿಸಲು ಸಹಕರಿಸಿ, ಶಾಲೆ ಶಿಕ್ಷಕರು ಹಾಗೂ ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ ಈಟಿವಿ ಭಾರತ್​​ಗೆ ಶಾಲಾ ಮುಖ್ಯೋಪಾಧ್ಯಾಯರು ಧನ್ಯವಾದ ತಿಳಿಸಿದ್ದಾರೆ.

Last Updated : Dec 2, 2019, 7:30 PM IST

For All Latest Updates

ABOUT THE AUTHOR

...view details