ಲಿಂಗಸುಗೂರು(ರಾಯಚೂರು):ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಕೃಷ್ಣಾ ನದಿ ನಡುಗಡ್ಡೆಯ ದಲಿತ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳು ಸಿಗದೆ ಪರದಾಡುವಂತಹ ಸ್ಥಿತಿ ಬಂದೊದಗಿದೆ.
ಜಿಲ್ಲಾಡಳಿತದ ನಿರ್ಲಕ್ಷ್ಯ: ನಡುಗಡ್ಡೆಯಲ್ಲಿ ಸಿಲುಕಿ ದಲಿತ ಕುಟುಂಬಗಳ ಪರದಾಟ - ಲಿಂಗಸುಗೂರು ಲೇಟೆಸ್ಟ್ ನ್ಯೂಸ್
ಸಣ್ಣ ಪ್ರಮಾಣದ ಸೇತುವೆ ನಿರ್ಮಿಸಿಕೊಟ್ಟರೆ ನೆಮ್ಮದಿ ಬದುಕು ನಡೆಸುತ್ತೇವೆ. ಅಧಿಕಾರಿಗಳು, ಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರವಾಹದಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದೇವೆ. ಕೃಷ್ಣಾ ನದಿ ಇತರೆ ನಡುಗಡ್ಡೆಗೆ ನೀಡಿದ ಮಹತ್ವ ತಮಗೆ ನೀಡುತ್ತಿಲ್ಲ. ಬೆಳೆ ಪರಿಹಾರ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ನಡುಗಡ್ಡೆಯ ರೈತರು ತಮ್ಮ ಅಸಮಾಧನ ಹೊರ ಹಾಕಿದ್ದಾರೆ..
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ತವದ ಗಡ್ಡಿಯಲ್ಲಿ 24ಕ್ಕೂ ಹೆಚ್ಚು ಕುಟುಂಬಗಳು 85 ಎಕರೆಗೂ ಹೆಚ್ಚು ಜಮೀನು ಉಳಿಮೆ ಮಾಡುತ್ತಾ ಬಂದಿದ್ದಾರೆ. ಐದು ಕುಟುಂಬಗಳು ನಡುಗಡ್ಡೆಯಲ್ಲಿ ವಾಸವಾಗಿದ್ದು, ಉಳಿದ ಕುಟುಂಬಗಳು ನಿತ್ಯ ಜಮೀನಿಗೆ ಬಂದು ಕೃಷಿ ಚಟುವಟಿಕೆ ಮುಗಿಸಿ ಮರಳಿ ಮನೆಗೆ ತೆರಳುತ್ತಾರೆ. ಶೀಲಹಳ್ಳಿಯಿಂದ ಗೋನವಾಟ್ಲ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಕೃಷ್ಣಾ ನದಿ ಸೆಳವು ಹರಿಯುತ್ತಿದೆ. ಹೀಗಾಗಿ, ಮಳೆ ಮತ್ತು ಪ್ರವಾಹದಿಂದ ರೈತ ಕುಟುಂಬಗಳು ಪರದಾಡುವಂತಾಗಿದೆ.
ಸಣ್ಣ ಪ್ರಮಾಣದ ಸೇತುವೆ ನಿರ್ಮಿಸಿಕೊಟ್ಟರೆ ನೆಮ್ಮದಿ ಬದುಕು ನಡೆಸುತ್ತೇವೆ. ಅಧಿಕಾರಿಗಳು, ಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರವಾಹದಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದೇವೆ. ಕೃಷ್ಣಾ ನದಿ ಇತರೆ ನಡುಗಡ್ಡೆಗೆ ನೀಡಿದ ಮಹತ್ವ ತಮಗೆ ನೀಡುತ್ತಿಲ್ಲ. ಬೆಳೆ ಪರಿಹಾರ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ನಡುಗಡ್ಡೆಯ ರೈತರು ತಮ್ಮ ಅಸಮಾಧನ ಹೊರ ಹಾಕಿದ್ಧಾರೆ.