ರಾಯಚೂರು :ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಜಯಂತಿಗಳನ್ನ ಸರಳವಾಗಿ ಆಚರಿಸುವ ದೃಷ್ಟಿಯಿಂದ ನಗರದಲ್ಲಿ ಬಾಬು ಜಗಜೀವನ್ ರಾಮ್ ಪುತ್ಥಳಿ ಬಳಿ ಅರೆಬರೆ ಸ್ವಚ್ಛತೆಗೊಳಿಸಿ ಆಚರಣೆ ಮಾಡಲು ಮುಂದಾದ ವೇಳೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪುತ್ಥಳಿ ಸ್ವಚ್ಛಗೊಳಿಸದೆ ಜಗಜೀವನ್ ರಾಮ್ ಜಯಂತಿ ಆಚರಣೆ.. ದಲಿತ ಸಂಘಟನೆಗಳಿಂದ ಕಿಡಿ - ರಾಯಚೂರು ಸುದ್ದಿ
ಲಾಕ್‌ಡೌನ್ ಹಿನ್ನೆಲೆಯಿಂದಾಗಿ ಸರಳವಾಗಿ ಆಚರಣೆ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಪುತ್ಥಳಿ ಬಳಿ ಸುಣ್ಣ-ಬಣ್ಣ, ಲೈಟ್ ವ್ಯವಸ್ಥೆ, ಹೂವಿನ ಹಾರದ ವ್ಯವಸ್ಥೆ ಸರಿಯಾಗಿ ಮಾಡದೇ ಜಿಲ್ಲಾಡಳಿತ ನಗರಸಭೆ ಆಡಳಿತದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು.
ನಗರದ ರೈಲ್ವೆ ಸ್ಟೇಷನ್ ಸರ್ಕಲ್ ಬಳಿಯ ಬಾಬು ಜಗಜೀವನ್ ರಾಮ್ ಪುತ್ಥಳಿ ಬಳಿ ಈ ಘಟನೆ ನಡೆದಿದೆ. ಲಾಕ್‌ಡೌನ್ ಹಿನ್ನೆಲೆಯಿಂದಾಗಿ ಸರಳವಾಗಿ ಆಚರಣೆ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಪುತ್ಥಳಿ ಬಳಿ ಸುಣ್ಣ-ಬಣ್ಣ, ಲೈಟ್ ವ್ಯವಸ್ಥೆ, ಹೂವಿನ ಹಾರದ ವ್ಯವಸ್ಥೆ ಸರಿಯಾಗಿ ಮಾಡದೇ ಜಿಲ್ಲಾಡಳಿತ ನಗರಸಭೆ ಆಡಳಿತದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಪಂ ಸಿಇಒ, ಪೌರಾಯುಕ್ತರು ಸೇರಿದಂತೆ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇದೇ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ದಲಿತ ಸಂಘಟನೆ ಮುಖಂಡರೊಂದಿಗೆ ಮಾತನಾಡಿ ಸರಳವಾಗಿ ಜಯಂತಿ ಆಚರಣೆ ಮಾಡಲಾಗಿದೆ ಅಂತಾ ಸ್ಪಷ್ಟನೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.