ಕರ್ನಾಟಕ

karnataka

ETV Bharat / state

ಸೀತಾಫಲ ಹಣ್ಣಿನ ಖರೀದಿ ಬಲು ಜೋರು.. ರಸ್ತೆ ಮೇಲಿಟ್ಟರೂ ಬೆಲೆ ಕಡಿಮೆ, ಹೆಚ್ಚು ತಾಜಾತನ - Raichuru news

ನಗರದಲ್ಲಿ ಹಲವಾರು ವರ್ಷಗಳಿಂದ ಹಣ್ಣಿನ ಋತುಮಾನದಲ್ಲಿ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿಯೇ ಹಣ್ಣಿನ ವ್ಯಾಪಾರ ನಡೆಯುತ್ತಿದ್ದು, ಹಣ್ಣು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ರೆ ಅನುಕೂಲಕರವಾಗಲಿದೆ..

Custard Apple sale increased in Raichuru
ಸೀತಾಫಲ ಹಣ್ಣಿನ ಖರೀದಿಗೆ ಮುಗಿಬಿದ್ದ ಗ್ರಾಹಕರು

By

Published : Sep 30, 2020, 7:50 PM IST

Updated : Sep 30, 2020, 9:56 PM IST

ರಾಯಚೂರು:ಋತುಮಾನದ ಹಣ್ಣು ಎಂದೇ ಖ್ಯಾತಿಗಳಿಸಿರುವ ಸೀತಾಫಲ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ನಗರದ ಜೈನ್ ಮಂದಿರ ರಸ್ತೆ ಹಾಗೂ ಎಲ್​ಐಸಿ ಕಚೇರಿ ಮುಂಭಾಗದಲ್ಲಿ ಪ್ರತಿವರ್ಷ ಈ ಸಮಯದಲ್ಲಿ ಸೀತಾಫಲ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.

ಸೀತಾಫಲ ಹಣ್ಣಿನ ಖರೀದಿ ಬಲು ಜೋರು..

ಹಣ್ಣುಗಳ ಗಾತ್ರದ ಮೇಲೆ ಬೆಲೆ ನಿಗದಿ ಯಾಗುತ್ತಿದ್ದು, ಪ್ರಸ್ತುತ 100 ರೂ. ರಿಂದ 50 ರೂ.ಗೆ ಕೆಜಿಯಂತೆ ಮಾರಾಟವಾಗುತ್ತಿದೆ. ನಗರದ ಹಣ್ಣಿನ ಅಂಗಡಿಗಳ ಬೆಲೆಗಿಂತ ಕಡಿಮೆ ಹಾಗೂ ಉತ್ತಮ ತಾಜಾ ಹಣ್ಣುಗಳು ರಸ್ತೆ ಬದಿಯ ವ್ಯಾಪಾರಿಗಳಲ್ಲಿ ಲಭ್ಯವಿರುವ ಕಾರಣ ಹಣ್ಣು ಪ್ರಿಯರು ದೂರದಿಂದ ಬಂದು ಖರೀದಿಸುತ್ತಿದ್ದಾರೆ.

ಹಣ್ಣು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ: ನಗರದಲ್ಲಿ ಹಲವಾರು ವರ್ಷಗಳಿಂದ ಹಣ್ಣಿನ ಋತುಮಾನದಲ್ಲಿ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿಯೇ ಹಣ್ಣಿನ ವ್ಯಾಪಾರ ನಡೆಯುತ್ತಿದ್ದು, ಹಣ್ಣು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ರೆ ಅನುಕೂಲಕರವಾಗಲಿದೆ ಎನ್ನುತ್ತಾರೆ ಮಾರಾಟಗಾರರು.

ಕಳೆದ ಎಂಟು ವರ್ಷಗಳಿಂದನೆರೆ ರಾಜ್ಯ ತೆಲಂಗಾಣದ ಮಹಬೂಬ್ ನಗರದಿಂದ ಹಣ್ಣುಗಳನ್ನು ತಂದು ಇಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ದೂರ ದೂರದಿಂದ ಬಂದು ಗ್ರಾಹಕರು ಹಣ್ಣು ತೆಗೆದುಕೊಂಡು ಹೋಗುತ್ತಿದ್ದಾರೆ.

Last Updated : Sep 30, 2020, 9:56 PM IST

ABOUT THE AUTHOR

...view details