ರಾಯಚೂರು:ಕ್ರೂಷರ್ ಚಾಲನೆ ಮಾಡುವ ವೇಳೆ ಚಾಲಕನಿಗೆ ಫಿಟ್ಸ್ (ಮೂರ್ಛೆರೋಗ)ಬಂದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಚಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಬಳಿ ನಡೆದಿದೆ.
ಕ್ರೂಷರ್ ವಾಹನ ಚಲಾಯಿಸುವಾಗಲೇ ಫಿಟ್ಸ್ ಬಂದು ಚಾಲಕ ಸಾವು.. - undefined
ಕ್ರೂಷರ್ ವಾಹನ ಚಲಾಯಿಸುವ ವೇಳೆ ಚಾಲಕನಿಗೆ ಏಕಾಏಕಿ ಫಿಟ್ಸ್ ಬಂದಿದ್ದು, ಆಯಾ ತಪ್ಪಿ ಚಾಲಕ ಪಕ್ಕದಲ್ಲಿ ನಿಂತಿದ್ದ ಜೀಪ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಬಳಿ ನಡೆದಿದೆ.
ರಾಯಚೂರು
ರವಿ (32) ಎಂಬಾತ ಮೃತ ಚಾಲಕ. ಸಿರವಾರ ಪಟ್ಟಣದಿಂದ ಹಟ್ಟಿಗೆ ತೆರಳುವಾಗ ಕ್ರೂಷರ್ ವಾಹನ ಚಾಲಕನಿಗೆ ಏಕಾಏಕಿ ಫಿಟ್ಸ್ ಬಂದಿದೆ. ಈ ವೇಳೆ ವಾಹನ ಆಯ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಜೀಪ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಷರ್ ಚಾಲಕ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಸಂಬಂಧ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.