ಕರ್ನಾಟಕ

karnataka

ETV Bharat / state

ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡ ಆರ್​​ಟಿಇ ಅನುದಾನ - RTE ACT grant

ಆರ್​ಟಿಇ ಕಾಯ್ದೆಯಡಿ ರಾಯಚೂರು ಜಿಲ್ಲೆಯ ಖಾಸಗಿ ಶಾಲೆಗಳಿಗೆ ಬಿಡುಗಡೆ ಮಾಡಬೇಕಾದ ಅನುದಾನವನ್ನು ಸರ್ಕಾರ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಬಿಡುಗಡೆ ಮಾಡುವಂತೆ ಖಾಸಗಿ ಶಾಲೆಗಳು ಒತ್ತಾಯಿಸಿವೆ.

Department of Public Education
ಸಾರ್ವಜನಿಕ ಶಿಕ್ಷಣ ಇಲಾಖೆ

By

Published : Nov 17, 2020, 3:38 PM IST

ರಾಯಚೂರು: ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಆರ್​ಟಿಇ ಕಾಯ್ದೆಯಡಿ ಶಾಲೆಗಳಿಗೆ ಕಾಲಕಾಲಕ್ಕೆ ಬಿಡುಗಡೆ ಮಾಡಬೇಕಾದ ಕೋಟ್ಯಂತರ ರೂ. ಅನುದಾನವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ.

ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್​ಟಿಇ ಕಾಯ್ದೆಯಡಿ ಶೇ.25ರಷ್ಟು ಸೀಟುಗಳನ್ನು ಮೀಸಲಿಡಬೇಕು. ಆರ್​ಟಿಇ ಕಾಯ್ದೆಯಡಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಶಾಲಾ ಶುಲ್ಕವನ್ನು ಶಿಕ್ಷಣ ಇಲಾಖೆ ಭರಿಸುತ್ತದೆ. ಕಾಯ್ದೆಯಡಿ ಜಿಲ್ಲೆಯ 2019-2020ನೇ ಸಾಲಿನಲ್ಲಿ 410 ಸೀಟುಗಳು ಭರ್ತಿಗೆ ಅವಕಾಶವಿತ್ತು. ಈ ಪೈಕಿ 116 ಮಕ್ಕಳು ಮಾತ್ರ ಪ್ರವೇಶ ಪಡೆದುಕೊಂಡಿದ್ದಾರೆ.

ಆರ್​ಟಿಇ ಕಾಯ್ದೆಯಡಿ ₹ 19 ಕೋಟಿ ಅನುದಾನ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ ಮೊದಲಿಗೆ ₹ 9 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಬಳಿಕ ₹5 ಕೋಟಿ ರೂ ಬಿಡುಗಡೆಯಾಗಿದೆ. ಇನ್ನು ₹5 ಕೋಟಿ ಬಾಕಿ ಉಳಿದಿದೆ. ನಿಯಮಾನುಸಾರ ಖಾಸಗಿ ಶಾಲೆಗಳಿಗೆ ಅನುದಾನ ಪಾವತಿಸಲಾಗುತ್ತಿದೆ. ಬಾಕಿ ಹಣ ಬಂದ ಬಳಿಕ ಅದನ್ನೂ ಪಾವತಿಸಲಾಗುವುದು ಎನ್ನುತ್ತಾರೆ ಡಿಡಿಪಿಐ ಬಿ.ಹೆಚ್.ಗೋನಾಳ.

ಡಿಡಿಪಿಐ ಬಿ.ಹೆಚ್.ಗೋನಾಳ

ಅಧಿಕಾರಿಗಳು ಈ ಮೇಲಿನಂತೆ ಹೇಳಿದರೆ, ಖಾಸಗಿ ಶಾಲೆಗಳು ಹೇಳುತ್ತಿರುವುದೇ ಬೇರೆ. ಕಾಲ ಕಾಲಕ್ಕೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳು ಆರ್ಥಿಕ ಪರಿಣಾಮ ಎದುರಿಸುತ್ತಿವೆ ಎಂದು ಆರೋಪಿಸಿವೆ. ಕೋಟ್ಯಂತರ ರೂಪಾಯಿ ಬಾಕಿ ಇರುವ ಕಾರಣ ನಮಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕೂಡಲೇ ಸರ್ಕಾರ ಬಾಕಿ ಮೊತ್ತ ಪಾವತಿಸಬೇಕು ಎಂದು ಒತ್ತಾಯಿಸಿವೆ.

ABOUT THE AUTHOR

...view details