ರಾಯಚೂರು: ಜಿಲ್ಲೆಯ ಕೆಲ ಜಮೀನುಗಳಿಗೆ ಕೃಷ್ಣಾ ನದಿಯಿಂದ ನೀರು ನುಗ್ಗಿ, ರೈತರು ಬೆಳೆದ ಬೆಳೆಗಳು ನೀರುಪಾಲಾಗಿವೆ. ಬೆಳೆ ನಷ್ಟದಿಂದ ರೈತರು ಕಣ್ಣೀರಿಡುವಂತಾಗಿದೆ.
ರಾಯಚೂರು: ಜಮೀನುಗಳಿಗೆ ನುಗ್ಗಿದ ಕೃಷ್ಣಾ ನದಿ ನೀರು... ರೈತರು ಕಂಗಾಲು - ರಾಯಚೂರು ಬೆಳೆ ನಷ್ಟ ನ್ಯೂಸ್
ಡಿ. ರಾಂಪೂರು ಗ್ರಾಮದ ರೈತನೋರ್ವ ತನ್ನ 6 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದು, ಉತ್ತಮ ಫಸಲು ಕೂಡ ಬಂದಿತ್ತು. ಆದ್ರೆ ಕೃಷ್ಣಾ ನದಿ ನೀರು ಜಮೀನಿಗೆ ನುಗ್ಗಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿದೆ.
ರಾಯಚೂರು ಜಮೀನುಗಳಿಗೆ ನುಗ್ಗಿದ ಕೃಷ್ಣಾ ನದಿ ನೀರು...ರೈತರು ಕಂಗಾಲು!
ಕೃಷ್ಣಾ ನದಿ ತೀರದಲ್ಲಿರುವ ರಾಯಚೂರು ತಾಲೂಕಿನ ಡಿ. ರಾಂಪೂರು ಗ್ರಾಮದ ರೈತನೋರ್ವ ತನ್ನ 6 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದು, ಉತ್ತಮ ಫಸಲು ಕೂಡ ಬಂದಿತ್ತು. ಇನ್ನೇನು ಫಸಲು ಕೈ ಸೇರುವ ಸಮಯದಲ್ಲಿ ನದಿ ನೀರು ಗದ್ದೆಗೆ ನುಗ್ಗಿದೆ. ಪರಿಣಾಮ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಬೆಳೆ ನೀರುಪಾಲಾಗಿ ರೈತ ಕಂಗಾಲಾಗಿದ್ದಾನೆ. ಹಾಗಾಗಿ ಸರ್ಕಾರ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದಾನೆ.
ಕಾಡ್ಲೂರು, ಗುರ್ಜಾಪುರ ಗ್ರಾಮ ಸೇರಿದಂತೆ ರಾಯಚೂರು ತಾಲೂಕಿನ 17 ಗ್ರಾಮಗಳಲ್ಲಿ ಕೆಲ ರೈತರ ಬೆಳೆ ಹಾನಿಯಾಗಿ ಸಂಕಷ್ಟಕ್ಕೀಡಾಗಿದ್ದಾರೆ.