ಕರ್ನಾಟಕ

karnataka

ETV Bharat / state

ಕಟಾವು ಮಾಡಿ ಗೂಡು ಹಾಕಿದ್ದ ತೊಗರಿ ಬೆಳೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು - ತೊಗರಿ ಬೆಳೆಗೆ ರಾತ್ರೋ ರಾತ್ರಿ  ಬೆಂಕಿ

ರಾಯಚೂರು ಜಿಲ್ಲೆಯ ಗ್ರಾಮವೊಂದರಲ್ಲಿ ಕಟಾವು ಮಾಡಿ ಗೂಡು ಹಾಕಿದ್ದ ತೊಗರಿ ಬೆಳೆಗೆ ರಾತ್ರೋರಾತ್ರಿ ಬೆಂಕಿ ಬಿದ್ದು ಹೊತ್ತು ಉರಿದ ಘಟನೆ ನಡೆದಿದೆ.

ಕಿಡಿಗೇಡಿಗಳು ಕೃತ್ಯವೆಸಗಿರುವ ಶಂಕೆ
ಕಿಡಿಗೇಡಿಗಳು ಕೃತ್ಯವೆಸಗಿರುವ ಶಂಕೆ

By

Published : Dec 22, 2019, 2:27 PM IST

ರಾಯಚೂರು: ಕಟಾವು ಮಾಡಿ ಹೊಲದಲ್ಲಿ ಗೂಡು ಹಾಕಿದ್ದ ತೊಗರಿ ಬೆಳೆಗೆ ರಾತ್ರೋರಾತ್ರಿ ಬೆಂಕಿ ಬಿದ್ದು ಹೊತ್ತಿ ಉರಿದಿರುವ ಘಟನೆ, ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮಟ್ಟೂರು ಗ್ರಾಮದಲ್ಲಿ ನಡೆದಿದೆ.

ಕಟಾವು ಮಾಡಿ ಗೂಡು ಹಾಕಿದ್ದ ತೊಗರಿ ಬೆಳೆಗೆ ಬೆಂಕಿ ಇಟ್ಟ ಕಿರಾತಕರು

ರೈತ ಸೂಗಪ್ಪ ಬಸಣ್ಣ ಎಂಬುವರ ಮೂರು ಎಕರೆ ಜಮೀನಿನಲ್ಲಿ ತೊಗರಿ ಬೆಳೆಯನ್ನ ಬೆಳೆಯಲಾಗಿತ್ತು. ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಬೆಳೆಯನ್ನ ಕಟಾವ್ ಮಾಡಿ ಹೊಲದಲ್ಲಿ ಗೂಡು ಹಾಕಲಾಗಿತ್ತು. ಆದ್ರೆ‌ ರಾತ್ರೋರಾತ್ರಿ ಗೂಡಿಗೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಳೆ ಬೆಂಕಿಗೆ ಆಹುತಿಯಾಗಿದೆ.

ಕಿಡಿಗೇಡಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮುದಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details