ಕರ್ನಾಟಕ

karnataka

ETV Bharat / state

ನಿಮ್ದು ಯಾಕೋ ಅತೀ ಆಯ್ತು.. ರಾಯಚೂರಿನಲ್ಲಿ ಕಪಿಚೇಷ್ಟೆ, ಎಕರೆಗಟ್ಟಲೇ ಹತ್ತಿ ಬೆಳೆ ನಾಶ - Postgraduate Center near Yaragera Village, Raichur Taluk

ಹಗಲು-ರಾತ್ರಿ ಎನ್ನದೇ ಕಾದರೂ ಸಹ ಕೋತಿಗಳ ಹಿಂಡು ಹೊಲದ ಮೇಲೆ ದಾಳಿ ನಡೆಸಿ ಬೆಳೆ ತಿಂದು ಟವರ್​ ಏರಿ ಕುಳಿತುಕೊಳ್ಳುತ್ತಿವೆ. ಬೆಳೆ ನಷ್ಟ ಪರಿಹಾರ ಒದಗಿಸುವ ಜತೆಗೆ ಕೋತಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ..

dsd
ರಾಯಚೂರಿನಲ್ಲಿ ಕೋತಿಗಳಿಂದ ಬೆಳೆ ನಾಶ

By

Published : Sep 19, 2020, 2:42 PM IST

ರಾಯಚೂರು: ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ ಬೆಳೆ ಹಾನಿಯಾಗುತ್ತಿದ್ರೆ, ಮತ್ತೊಂದು ಕಡೆ ಕೋತಿ ಹಾವಳಿಯಿಂದ ರೈತ ಬೆಳೆದ ಹತ್ತಿ ಬೆಳೆ ನಾಶವಾಗುತ್ತಿದೆ.

ರಾಯಚೂರಿನಲ್ಲಿ ಕೋತಿಗಳಿಂದ ಬೆಳೆ ನಾಶ

ತಾಲೂಕಿನ ಯರಗೇರಾ ಗ್ರಾಮದ ಬಳಿಯ ಸ್ನಾತ್ತಕೋತ್ತರ ಕೇಂದ್ರ ಬಳಿ ರೈತ 20 ಎಕರೆ ಹೊಲದಲ್ಲಿನ ಹತ್ತಿ ಬೆಳೆಯನ್ನು ಕೋತಿಗಳು ನಾಶ ಮಾಡಿವೆ. ರೈತ ಶಿವರಾಜ್ ಕೃಷ್ಣ, ಸವಾರೆಮ್ಮ ಹನುಮಂತಪ್ಪ, ತಿಪ್ಪಯ್ಯ ಹುಲಿಗೆಪ್ಪ, ನರಸಪ್ಪ ಹುಲಿಗೆಪ್ಪ ಹಾಗೂ ನಲ್ಲರೆಡ್ಡಿ ಶಿವಶಂಕರ ರೆಡ್ಡಿ ಎಂಬುವರ ಹತ್ತಿ ಬೆಳೆಯನ್ನು ಕಪಿಗಳು ಹಾಳುಗೆಡವಿವೆ.

ಹಗಲು-ರಾತ್ರಿ ಎನ್ನದೇ ಕಾದರೂ ಸಹ ಕೋತಿಗಳ ಹಿಂಡು ಹೊಲದ ಮೇಲೆ ದಾಳಿ ನಡೆಸಿ ಬೆಳೆ ತಿಂದು ಟವರ್​ ಏರಿ ಕುಳಿತುಕೊಳ್ಳುತ್ತಿವೆ. ಬೆಳೆ ನಷ್ಟ ಪರಿಹಾರ ಒದಗಿಸುವ ಜತೆಗೆ ಕೋತಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.

ABOUT THE AUTHOR

...view details